ಕಾಸರಗೋಡು : ನೀರು ಬತ್ತಿದ ಬಾವಿಯಲ್ಲಿ ಯುವಕನ ಅಸ್ಥಿಪಂಜರ ಪತ್ತೆ
ಕಾಸರಗೋಡು, ಮೇ 29: ನೀರು ಬತ್ತಿದ ಬಾವಿಯಲ್ಲಿ ಯುವಕನೋರ್ವನ ಅಸ್ಥಿಪಂಜರ ಪತ್ತೆಯಾದ ಘಟನೆ ಪೆರ್ಲ ದಲ್ಲಿ ನಡೆದಿದೆ.
ಪೆರ್ಲ ಏಳ್ಕಾನದ ರಾಮ ( 30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಅವರು ಹಲವೆಡೆ ಕೆಲಸಕ್ಕೆ ತೆರಳುತ್ತಿದ್ದರು. ಕೆಲಸಕ್ಕೆಂದು ತೆರಳುತ್ತಿದ್ದ ಅವರು ಕೆಲ ತಿಂಗಳ ಬಳಿಕ ಮನೆಗೆ ಮರಳುತ್ತಿದ್ದರು.
ಇದರಿಂದ ಮನೆಯವರು ಅವರ ಬಗ್ಗೆ ಗಂಭೀರವಾಗಿ ಗಮನಹರಿಸುತ್ತಿರಲಿಲ್ಲ . ಈ ನಡುವೆ ಮನೆಗೆ ತೆರಳುವ ದಾರಿ ನಡುವಿನ ಸುಮಾರು 15 ಅಡಿಯ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





