ಸಕ್ಲೇನ್ ಇಂಗ್ಲೆಂಡ್‌ನ ಸ್ಪಿನ್ ಸಲಹೆಗಾರ: ಇಸಿಬಿ ಚಿಂತನೆ

ಲಂಡನ್, ಮೇ 28: ಪಾಕಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಸಲಹೆಗಾರರನ್ನಾಗಿ ಪಾಕ್‌ನ ಮಾಜಿ ಸ್ಪಿನ್ನರ್ ಸಕ್ಲೇನ್ ಮುಶ್ತಾಕ್‌ರನ್ನು ನೇಮಿಸಲು ಇಸಿಬಿ ಚಿಂತಿಸುತ್ತಿದೆ.
ಮಾಜಿ ಆಫ್ ಸ್ಪಿನ್ನರ್ ಮುಶ್ತಾಕ್ ಪಾಕಿಸ್ತಾನದ ಟಿವಿಯೊಂದಿಗೆ ಕ್ರಿಕೆಟ್ ವಿಶ್ಲೇಷಕರಾಗಿ 2017ರ ತನಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೀಗ ಅವರಿಗೆ ಸೀಮಿತ ಅವಧಿಗೆ ಕೋಚಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅನುಮತಿ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್‌ನ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್‌ಗೆ ಸಕ್ಲೇನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಸಕ್ಲೇನ್ ಈ ಹಿಂದೆ ಪಾಕಿಸ್ತಾನವಲ್ಲದೆ ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶದ ಸ್ಪಿನ್ನರ್‌ಗಳೊಂದಿಗೂ ಕಾರ್ಯನಿರ್ವಹಿಸಿದ್ದಾರೆ.
ಐಸಿಸಿಯಿಂದ ಶಂಕಾಸ್ಪದ ಬೌಲಿಂಗ್ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಪಾಕ್ ಸ್ಪಿನ್ನರ್ ಸಯೀದ್ ಅಜ್ಮಲ್ ಬೌಲಿಂಗ್ ಶೈಲಿಯನ್ನು ಬದಲಿಸಲು ನೆರವಾಗಲು ಪಿಸಿಬಿಯಿಂದ ಸಕ್ಲೇನ್ ಆಯ್ಕೆಯಾಗಿದ್ದರು.
2014ರಲ್ಲಿ ಪಾಕ್‌ನ ಇನ್ನೋರ್ವ ಆಟಗಾರ ಮುಸ್ತಾಕ್ ಅಹ್ಮದ್ ಸ್ಪಿನ್ ಕೋಚ್ ಹುದ್ದೆ ತ್ಯಜಿಸಿದ ಬಳಿಕ ಇಂಗ್ಲೆಂಡ್ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆ ತೆರವಾಗಿದೆ. 2008ರಲ್ಲಿ ಮುಸ್ತಾಕ್ ಇಂಗ್ಲೆಂಡ್ ಕೋಚ್ ಆದ ನಂತರ ಗ್ರೇಮ್ ಸ್ವಾನ್ ಇಂಗ್ಲೆಂಡ್‌ನ ಶ್ರೇಷ್ಠ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು.
ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ ಜೂ.18 ರಿಂದ ನಾಲ್ಕು ಟೆಸ್ಟ್, 5 ಏಕದಿನ ಹಾಗೂ ಏಕೈಕ ಟ್ವೆಂಟಿ-20 ಸರಣಿಯನ್ನಾಡಲು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಜು.14 ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.







