ಮಂಜೇಶ್ವರ: ಕಾಂಕ್ರೀಟ್ ಸ್ಟೆಪ್ ಕುಸಿದು ಗಾರೆ ಕೆಲಸಗಾರ ಮೃತ್ಯು

ಮಂಜೇಶ್ವರ, ಮೇ 29: ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪದ ಮನೆಯೊಂದರ ಕಾಂಕ್ರೀಟ್ ಸ್ಟೆಪ್ ಕುಸಿದು ಮೈ ಮೇಲೆ ಬಿದ್ದು ಗಾರೆ ಕೆಲಸಗಾರರೋರ್ವರು ಮೃತಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಮೃತರನ್ನು ತ್ರಿಶ್ಶೂರು ಮೂಲದ ಮಂಜೇಶ್ವರದಲ್ಲಿ ವಾಸವಿರುವ ರಾಮನ್ ಎಂಬವರ ಪುತ್ರ ಪ್ರಸನ್ನ(42) ಎಂದು ಗುರುತಿಸಲಾಗಿದೆ.
ಇಲ್ಲಿನ ಜಯರಾಜ್ ಎಂಬವರ ಮನೆಯಲ್ಲಿ ಸಾರಣೆ ಕೆಲಸ ಮಾಡುತ್ತಿದ್ದ ವೇಳೆ ಕಾಂಕ್ರೀಟ್ ಸ್ಟೆಪ್ ಕುಸಿದು ಪ್ರಸನ್ನರ ಮೈ ಮೇಲೆ ಬಿದ್ದಿದೆ. ಕಾಂಕ್ರೀನ ಅಡಿಯಲ್ಲಿ ಸಿಲುಕಿದ ಇವರನ್ನು ಉಪ್ಪಳದ ಅಗ್ನಿಶಾಮಕ ದಳ ಮೇಲಕ್ಕೆತ್ತಿದೆ.
ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





