ಕಣ್ಣಿನ ಚಿಕಿತ್ಸೆಗೆ ಬಂದ ಯುವತಿ ಅತ್ಯಾಚಾರ: ವೈದ್ಯನ ಬಂಧನ

ಕೋಲ್ಕತಾ, ಮೇ 29: ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕಣ್ಣಿನ ಚಿಕಿತ್ಸೆಗಾಗಿ ಸೇರಿಸಿದ್ದ ಯುವತಿಯನ್ನು ಅತ್ಯಾಚಾರ ಗೈದ ಆರೋಪದಲ್ಲಿ ವೈದ್ಯರೊಬ್ಬರನ್ನು ಬಂಧಿಸಲಾಗಿದೆ. ಯುವತಿಗೆ ಕಣ್ಣಿನ ಚಿಕಿತ್ಸೆ ನೀಡಲು ಈವಾರ ನರ್ಸಿಂಗ್ ಹೋಂಗೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಅವಳು ಪ್ರತಿಭಟಿಸಿದರೂ ಅತ್ಯಾಚಾರ ವೆಸಗಿದ್ದು ಇದನ್ನು ಯುವತಿ ನಂತರ ಆಸ್ಪತ್ರೆಯ ಮಹಿಳಾ ಉದ್ಯೋಗಿಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಳು. ಯುವತಿಯ ಕುಟುಂಬ ಸದಸ್ಯರು ಬೆನಿಯಾಪುಕುರ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ನೀಡಿದ್ದರು. ವೈದ್ಯರನ್ನು ಬಂಧಿಸಿ ನಗರದ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ವೈದ್ಯರಿಗೆ ಪೊಲೀಸ್ ರಿಮಾಂಡ್ ವಿಧಿಸಿದೆ.
Next Story





