ಮನೆಗೆ ನುಗ್ಗಿ ನಗ-ನಗದು ಕಳವು
ಮಂಗಳೂರು, ಮೇ 29: ಜಪ್ಪಿನಮೊಗರಿನ ಮನೆಯೊಂದಕ್ಕೆ ನುಗ್ಗಿದ ಅಪರಿಚಿತ ಕಳ್ಳರು ಸುಮಾರು 1.65 ಲಕ್ಷ ರೂ. ವೌಲ್ಯದ ನಗ-ನಗದು ಕಳವು ಮಾಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಜಪ್ಪಿನಮೊಗರಿನ ಲಯನ್ಸ್ ಕ್ಲಬ್ ಬಳಿಯ ಸಂಧ್ಯಾ ನಾಯಕ್ ಎಂಬವರ ಗಣೇಶ ನಿಲಯಕ್ಕೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟುಗಳನ್ನು ಜಾಲಾಡಿ ಚಿನ್ನ, ದೇವರ ಬೆಳ್ಳಿ ಸಾಮಗ್ರಿಗಳು ಹಾಗೂ 15,000 ನಗದು ಸೇರಿ ಸುಮಾರು 1.65 ಲಕ್ಷ ರೂ. ವೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಂಧ್ಯಾನಾಯಕ್ ಶನಿವಾರ ತಮ್ಮ ಮಕ್ಕಳೊಂದಿಗೆ ತಾಯಿ ಮನೆಗೆ ತೆರಳಿದ್ದರು. ಅವರು ಇಂದು ಬೆಳಗ್ಗೆ ಮರಳಿದಾಗ ಮನೆಯ ಮುಂಭಾಗದ ಬಾಗಿಲು ಒಡೆಯಲಾಗಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿದ್ದ ಎಲ್ಲಾ ವಸ್ತುಗಳನ್ನು ಜಾಲಾಡಿದ್ದು, ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಬೆರಳಚ್ಚು ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





