ಪೊಲೀಸರ ಸಾಮೂಹಿಕ ಪ್ರತಿಭಟನೆಗೆ ಭಟ್ಕಳದ ನಾಮಧಾರಿ ಗೆಳೆಯರ ಬಳಗ ಬೆಂಬಲ
ಭಟ್ಕಳ, ಮೇ 29: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿ ಜೂನ್ 4ರಂದು ನಡೆಸಲು ಉದ್ದೇಶಿಸಿರುವ ಸಾಮೂಹಿಕ ರಜೆಗೆ ನಾಮಧಾರಿ ಗೆಳೆಯರ ಬಳಗದ ವತಿಯಿಂದ ಬೆಂಬಲ ನೀಡುತ್ತಿದೆಎಂದು ಸಂಘದ ಕಾರ್ಯನಿರ್ವಾಹಕ ಶಂಕರ್ ನಾಯ್ಕ ತಿಳಿಸಿದ್ದಾರೆ.
ಅತಿ ಸೂಕ್ಷ್ಮ ಪ್ರದೇಶವಾಗಿರುವ ಭಟ್ಕಳದಲ್ಲಿ ಪೊಲೀಸ್ ಸಿಬ್ಬಂದಿಯ ಸಾಮೂಹಿಕ ರಜೆಯಿಂದಾಗಿ ಏನಾದರೂ ತೊಂದರೆಗಳು ಉಂಟಾಗಬಾರದೆಂಬ ಕಾರಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
Next Story





