ನರೇಶ್ ಶೆಣೈನ ಇನ್ನೋರ್ವ ಆಪ್ತ ವಶಕ್ಕೆ
ವಿನಾಯಕ ಬಾಳಿಗಾ ಹತ್ಯೆ ಪ್ರಕರಣ

ಮಂಗಳೂರು, ಮೇ 29: ಆರ್‌ಟಿಐ ಕಾರ್ಯಕರ್ತ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈನ ನಿಕಟವರ್ತಿ ಮಂಜು ಎಂಬಾತನನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಚಂದ್ರಶೇಖರ ಎಂ. ಸ್ಪಷ್ಟಪಡಿಸಿದ್ದಾರೆ.
ಬಾಳಿಗಾ ಹತ್ಯೆಯ ಬಳಿಕ ತಲೆಮರೆಸಿಕೊಂಡಿರುವ ನರೇಶ್ ಶೆಣೈನ ಶೋಧ ಕಾರ್ಯವನ್ನು ಮುಂದುವರಿಸಿರುವ ಪೊಲೀಸರು ನರೇಶ್ ಶೆಣೈ ಸಂಪರ್ಕದಲ್ಲಿದ್ದು, ಆತನಿಗೆ ನೆರವು ನೀಡುತ್ತಿದ್ದ ಮಂಜುವನ್ನು ವಶಕ್ಕೆ ಪಡೆದಿದ್ದಾರೆ.
ನರೇಶ್ ಶೆಣೈಯನ್ನು ಅಡಗಿಕೊಳ್ಳಲು ಅಥವಾ ಅಡಗುದಾಣ ಬದಲಾಯಿಸಲು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಮಂಜುವನ್ನು ವಶಕ್ಕೆ ಪಡೆದಿರುವುದಾಗಿ ಕಮಿಷನರ್ ಪತ್ರಿಕೆಗೆ ತಿಳಿಸಿದ್ದಾರೆ.
Next Story





