ವಿಷ ಸೇವನೆ: ನವವಿವಾಹಿತ ಯುವತಿ ಆಸ್ಪತ್ರೆಗೆ ದಾಖಲು
ಮುಂಡಗೋಡ, ಮೇ 29: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ನವವಿವಾಹಿತ ಯುವತಿಯೋರ್ವಳು ವಿಷ ಸೇವನೆಯಿಂದ ಅಸ್ವಸ್ಥಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥ ಯುವತಿಯನ್ನು ಭಾರತಿ ರಾಜೇಶ ಬಂಕಾಪುರ (22) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿ ಇದೀಗ ವಿಷ ಸೇವನೆಯಿಂದ ಅಸ್ವಸ್ಥಳಾಗಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್ ಅಶೋಕ ಗುರಾಣಿ ಹಾಗೂ ಪಿಎಸ್ಸೈ ಲಕ್ಕಪ್ಪ ನಾಯಕ ಘಟನೆ ಬಗ್ಗೆ ಮಾಹಿತಿ ಪಡೆದರು.
Next Story





