ನೌಶಾದ್ ಬಾಖವಿಯವರ ಪುತ್ರ ಬಾವಿಗೆ ಬಿದ್ದು ಮೃತ್ಯು
ಕೊಲ್ಲಂ,ಮೇ 30 : ಚಿರಯಿನ್ ಕೀಝಿಲ್ ವಿದ್ಯಾರ್ಥಿಯಾಗಿರುವ ಖ್ಯಾತ ವಾಗ್ಮಿ ಎಂ. ಎ. ನೌಶಾದ್ ಬಾಖವಿ ಅವರ ಹಿರಿಯ ಪುತ್ರ ಮುಹಮ್ಮದ್ ಮುಷ್ತಾಕ್ (10) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಮದ್ರಸಕ್ಕೆ ಹೋಗುತ್ತಿರುವಾಗ ದಾರಿ ಮಧ್ಯೆಯಿರುವ ಬಾವಿಯೊಂದಕ್ಕೆ ಜಾರಿಬಿದ್ದು ಈ ದುರ್ಘಟನೆ ಸಂಭವಿಸಿದೆಂದು ಮಾಧ್ಯಮಗಳು ವರದಿ ಮಾಡಿವೆ.ನೌಶಾದ್ ಬಾಖವಿಯವರು ಕಳೆದ ಮೂರು ದಿನಗಳ ಹಿಂದೆ ಉಮ್ರಾ ನಿರ್ವಹಿಸಲು ಸೌದಿಗೆ ತೆರಳಿದ್ದರು.
Next Story