ಬಂಟ್ವಾಳ: ಸಿಡಿಲು ಬಡಿದು ಮನೆಗೆ ಹಾನಿ

ಬಂಟ್ವಾಳ, ಮೇ 30: ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಯು.ಬಾಬು ಬೆಳ್ಚಡ ಎಂಬವರ ಮನೆಗೆ ಸಿಡಿಲು ಅಪ್ಪಳಿಸಿದ್ದು ಲಕ್ಷಂತರ ರೂಪಾಯಿ ನಷ್ಟ ಸಂಭವಿಸಿದೆ.
ಶನಿವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದೆ. ಮನೆಯ ಭಾಗಶಃ ಗೋಡೆಗಳು ಸಿಡಿಲಿನ ಬಡಿತಕ್ಕೆ ಬಿರುಕು ಬಿಟ್ಟಿದ್ದು ವಿದ್ಯುತ್ ಸಲಕರಣೆಗಳು ಸುಟ್ಟು ಕರಕಲಾಗಿದೆ. ಮನೆ ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
Next Story





