ಕೇರಳ: ಜೂನ್ 15ರಂದು ವಾಹನ ಮುಷ್ಕರ
ಕಾಸರಗೋಡು, ಮೇ 30: ಕೇರಳದಲ್ಲಿ ಜೂನ್15 ರಂದು ವಾಹನ ಮುಷ್ಕರ ನಡೆಯಲಿದೆ. ಮೋಟಾರು ವಾಹನ ಉದ್ಯಮ ಸಂರಕ್ಷಣಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಬಸ್ಸು, ಲಾರಿ ಸೇರಿದಂತೆ ಎಲ್ಲಾ ವಾಹನಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ.
ಹತ್ತು ವರ್ಷಕ್ಕಿಂತ ಮೇಲಿನ 2000 ಸಿ.ಸಿ ಡೀಸೆಲ್ ವಾಹನಗಳನ್ನು ಒಂದು ತಿಂಗಳೊಳಗೆ ರಸ್ತೆಯಿಂದ ಹಿಂದೆ ಪಡೆಯಬೇಕು ಎಂಬ ಹಸಿರು ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಮುಷ್ಕರ ನಡೆಯಲಿದೆ ಎಂದು ತಿಳಿದುಬಂದಿದೆ.
Next Story





