ಬಾಳಿಗಾ ಕೊಲೆ ಪ್ರಕರಣ: ಆರೋಪಿಗೆ ಶರತ್ತುಬದ್ಧ ಜಾಮೀನು

ಮಂಗಳೂರು, ಮೇ 30: ಆರ್‌ಟಿಐ ಕಾರ್ಯಕರ್ತ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಆತನಿಗೆ ನೆರವು ನೀಡುತ್ತಿದ್ದ ಮಂಜುನಾಥ ಶೆಣೈ ಯಾನೆ ಮಂಜು ಎಂಬಾತನಿಗೆ ಜಿಲ್ಲಾ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ನೀಡಿದೆ.
ನರೇಶ್ ಶೆಣೈಯನ್ನು ಅಡಗಿಕೊಳ್ಳಲು, ಆತನ ಅಡಗುದಾಣ ಬದಲಾಯಿಸಲು ಸಹಾಯ ಮಾಡುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಮಂಜು ನಿರೇಶ್ವಾಲ್ಯನನ್ನು ರವಿವಾರ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಇಂದು ಪೊಲೀಸರು ಮಂಜುನಾಥನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ಶರತ್ತುಬದ್ಧ ಜಾಮೀನು ನೀಡಿದೆ.
Next Story





