ತಾನೆಲ್ಲೂ ಅಡಗಿ ಕೂತಿಲ್ಲ, ಎರ್ನಾಕುಲಂನಲ್ಲಿದ್ದೇನೆ, ತಾನು ಭೂಗತನಾಗಿದ್ದೇನೆಂಬ ಆರೋಪವನ್ನು ನಿರಾಕರಿಸಿದ ಜೋಮೋನ್
ಜಿಶಾ ಕೊಲೆಪ್ರಕರಣ
.jpg)
ತಿರುವನಂತಪುರಂ, ಮೇ 30: ಜಿಶಾ ಕೊಲೆ ಪ್ರಕರಣದಲ್ಲಿ ತಾನು ಎತ್ತಿರುವ ಆರೋಪಗಳಲ್ಲಿ ಈಗಲೂ ದೃಢವಾಗಿದ್ದೇನೆ.ತಾನು ಭೂಗತನಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಜೋಮೋನ್ ಪುತ್ತನ್‌ಪುರಕ್ಕಲ್ ತಿಳಿಸಿದ್ದಾರೆಂದು ವರದಿಯಾಗಿದೆ. "ತಾನು ಅಡಗಿಕೂತಿದ್ದೇನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಕಟ್ಟು ಕತೆಯಾಗಿದೆ" ಎಂದು ಜೋಮೋನ್ ಸ್ಪಷ್ಟ ಪಡಿಸಿದ್ದಾರೆ. ಕೊಲೆಯಾಗಿರುವ ಜಿಶಾ ಪೆರುಂಬಾವೂರಿನ ಕಾಂಗ್ರೆಸ್ ನಾಯಕರೊಬ್ಬರ ಮಗಳಾಗಿದ್ದು ಅ ನಾಯಕನ ಮನೆಗೆ ಹೋಗಿ ಆಸ್ತಿಹಕ್ಕು ಕೇಳಿದ್ದಕ್ಕಾಗಿ ಅವಳ ಕೊಲೆಯಾಗಿದೆ. ಇದು ತನಿಖೆಯಾಗಬೇಕೆಂದು ಆಗ್ರಹಿಸಿ ಜೋಮೋನ್ ಮುಖ್ಯಮಂತ್ರಿಗೆ ದೂರು ನೀಡಿದ್ದರು. ಆನಂತರ ಈ ವಿಷಯ ಕೇರಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು.
" ತಾನು ಮುಖ್ಯಮಂತ್ರಿಗೆ ನೀಡಿದ ದೂರಿನ ಕುರಿತು ವಾರ್ತೆಗಳು ಪ್ರಮುಖ ಪತ್ರಿಕೆಗಳಲ್ಲಿ ಬಂದಿರಲಿಲ್ಲ. ಆದರೆ ಪಿ.ಪಿ. ತಂಗಚ್ಚನ್ ಜಿಶಾ ತನ್ನ ಮಗಳಲ್ಲ ಎಂದುದು ಹಾಗೂ ಜಿಶಾರ ತಾಯಿತನ್ನ ಮನೆಯಲ್ಲಿ ಕೆಲಸಕ್ಕಿರಲಿಲ್ಲ ಎಂದು ಹಾಗೂ ಅವರು ಈಕುರಿತು ಮುಖ್ಯಮಂತ್ರಿಗೆ ದೂರು ನೀಡಿದ್ದು ಕೆಲವು ಮಾಧ್ಯಮಗಳು ದೊಡ್ಡ ಸುದ್ದಿಯನ್ನಾಗಿ ಪ್ರಕಟಿಸಿವೆ" ಎಂದು ಜೋಮೋನ್ ಹೇಳಿದ್ದಾರೆ. "ನಾನು ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ. ಆದರೆ ಆರೋಪಗಳನ್ನು ಪ್ರತಿಭಟಿಸಿ ತಂಗಚ್ಚನ್ ರಂಗಪ್ರವೇಶಿಸಿದ್ದಾರೆ. ಇದರಿಂದ ನನ್ನ ಆರೋಪ ಯಾರ ಕುರಿತಾಗಿತ್ತೆಂದು ಎಲ್ಲರೂ ಅರಿಯುವಂತಾಯಿತು" ಎಂದು ಜೋಮೋನ್ ಹೇಳಿದ್ದಾರೆ.
"ತನ್ನ ವಿರುದ್ಧ ಜಿಶಾ ತಂದೆ ಪಾಪ್ಪು ದೂರು ನೀಡಿದ್ದು ದಲಿತ ದೌರ್ಜನ್ಯ ವಿರೋಧಿ ಪ್ರಕಾರ ಕೇಸು ದಾಖಲಿಸಲಾಗಿದೆ. ತಾನು ಅಡಗಿ ಕೂತಿದ್ದೇನೆಂದು ಕೇರಳದ ಕೆಲವು ಮುಖ್ಯ ಪತ್ರಿಕೆಗಳು ವರದಿ ಮಾಡಿವೆ.ಆದರೆ ಪಾಪ್ಪು ಸ್ವತಃ ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ವಾದವೂ ವಿಫಲವಾಗಿದೆ" ಎಂದ ಜೋಮೋನ್ ಪುತ್ತನ್‌ಪುರಕ್ಕಲ್ "ನಾನು ಎಲ್ಲಿಗೂ ಹೋಗಿಲ್ಲ. ಇಲ್ಲಿ ಎರ್ನಾಕುಲಂನಲ್ಲಿ ಇದ್ದೇನೆ.ಪೆರುಂಬಾವೂರ್ ಡಿವೈಎಸ್ಪಿ ಅನಿಲ್‌ರೊಂದಿಗೆ ಕಳೆದ ದಿವಸ ಮಾತಾಡಿದ್ದೇನೆ. ತನ್ನ ವಿರುದ್ಧ ಯಾವ ದೂರು ಬಂದಿಲ್ಲ ಎಂದು ತನಗೆ ಡಿವೈಎಸ್ಪಿ ತಿಳಿಸಿದ್ದಾರೆಂದು" ಸ್ಪಷ್ಟಪಡಿಸಿದ್ದಾರೆ.







