ರೊಜಾರಿಯೋ ಶಾಲಾ ಪ್ರಾರಂಭೋತ್ಸವ
ಮಂಗಳೂರು,ಮೇ.30:ನಗರದ ರೊಜಾರಿಯೊ ಪ್ರೌಢಶಾಲೆಯಲ್ಲಿ 2016-17ನೆ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಅಲೋಶಿಯಸ್ ಡಿಸೋಜ, ಶಾಲೆಯ ಹಿರಿಯ ಶಿಕ್ಷಕಿ ಕು. ಮೆಟಿಲ್ಡಾ ಡಿಸೋಜ ಹಾಗೂ ವಿದ್ಯಾರ್ಥಿ ಪ್ರತಿನಿಧಿ ರಕ್ಷಿತ್ ಡಿ. ಬೋಳಾರ್ ಮತ್ತು ಕಸ್ತೂರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕವನ್ನು ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿ ನೇಹಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಿಂಪ್ಸನ್ ಜೋಯ್ ಫೆರಾವೋ ವಂದಿಸಿದರು.
Next Story





