ಝುಬೈರ್ ಮಾಝಾಹಿರಿ ಉಸ್ತಾದ್ ನಿಧನ

ಉಳ್ಳಾಲ, ಮೇ 30: ಉಳ್ಳಾಲದ ಹಿರಿಯ ವಿದ್ವಾಂಸ ಝುಬೈರ್ ಮಾಝಾಹಿರಿ ಉಸ್ತಾದ್ ವಳವೂರು(48) ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಉಳ್ಳಾಲದ ಮೇಲಂಗಡಿ ಹೊಸಪಳ್ಳಿಯಲ್ಲಿ 10 ವರ್ಷ ಸದರ್ ಹಾಗೂ ಇಮಾಂ ಆಗಿ ಬಳಿಕ ಕುಳಾಯಿ ಮಸೀದಿಯ ಖತೀಬರಾಗಿ ಸೇವೆಗೈದಿದ್ದರು. ಇದೀಗ ಗೂಡಿನಬಳಿ ಮಸೀದಿಯ ಖತೀಬರಾಗಿ ಸೇವೆಗೈಯ್ಯತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಮಝಾಹಿರಿ ಉಸ್ತಾದ್‌ರ ನಿಧನಕ್ಕೆ ಮಂಜನಾಡಿ ಅಲ್ ಮದೀನದ ಸಾರಥಿ ಅಬ್ಬಾಸ್ ಉಸ್ತಾದ್, ಮಾಣಿ ಉಸ್ತಾದ್, ಕರ್ನಾಟಕ ರಾಜ್ಯ ಜಮೀಯತುಲ್ ಉಲಮಾ ಕಾರ್ಯದರ್ಶಿ ಯು.ಕೆ. ಮುಹಮ್ಮದ್ ಸಅದಿ ವಳವೂರು, ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಅದಿ ನಂದಾವರ,ಎಸ್‌ವೈಎಸ್ ಕರ್ನಾಟಕ ರಾಜ್ಯ ಸದಸ್ಯ ಅಶ್ರಫ್ ಕಿನಾರ,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಅಬೂ ಫಹದ್ ಹಸನ್ ಅಮ್ಜದಿ ಹಾಗೂ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್,ಎಸ್‌ವೈಎಸ್ ಉಳ್ಳಾಲ ಸೆಂಟರ್ ಸಂತಾಪ ಸೂಚಿಸಿದೆ.





