ಗುತ್ತಕಾಡು ಸರಕಾರಿ ಶಾಲಾ ಪ್ರಾರಂಬೋತ್ಸವ

ಮುಲ್ಕಿ, ಮೇ 30: ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಬೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ತಾಳಿಪಾಡಿಗುತ್ತು ಧನಪಾಲ್ ವಿ.ಶೆಟ್ಟಿ ಮತ್ತು ಬಾಸ್ಕರ ಎಂ. ಶೆಟ್ಟಿ ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಯಿತು.
ಕಿನ್ನಿಗೋಳಿ ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯೆ ವಾಣಿ, ದಿನೇಶ್ ಶೆಟ್ಟಿ ತಾಳಿಪಾಡಿ ಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಸಲಹೆಗಾರ ಚಂದ್ರಶೇಖರ್, ಬಾಲಕೃಷ್ಣ ಡಿ. ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಹಶಿಕ್ಷಕರಾದ ಅನುರಾಧ ಸಿ.ಎನ್.,ಯಶೋಧಾ, ಸುಷ್ಮಾ, ಸಂತೋಷ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Next Story





