ಸಾಹಿತಿ ದೇ ಜವರೇಗೌಡ ನಿಧನ

ಮೈಸೂರು, ಮೇ 30: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡರು (98) ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ದೇ. ಜವರೇಗೌಡ ಅವರು ಪಂಪ ಪ್ರಶಸ್ತಿ (1998), ಪದ್ಮಶ್ರೀ (2001), ಗೊರೂರು ಪ್ರಶಸ್ತಿ (2003) ಮತ್ತು ಕರ್ನಾಟಕ ರತ್ನ(2008) ಪ್ರಶಸ್ತಿಗೆ ಭಾಜನರಾಗಿದ್ದರು.
1970ರಲ್ಲಿ ಅಖಿಲ ಭಾರತ 47ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು 135ಕ್ಕೂ ಅಧಿಕ ವಿವಿಧ ಪ್ರಕಾರದ ಕೃತಿಗಳನ್ನು ಅವರು ಬರೆದಿದ್ದಾರೆ.
ಪ್ರೊ. ದೇ. ಜವರೇಗೌಡರು 1969ರಿಂದ 1975ರ ತನಕ ಮೈಸೂರು ವಿವಿ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ(1969-1975) ಅವಧಿಯಲ್ಲಿ ವಿವಿಯಲ್ಲಿ 28 ಹೊಸ ಅಧ್ಯಯನ ವಿಭಾಗಗಳನ್ನು ಆರಂಭಿಸಲಾಗಿತ್ತು.
Next Story





