ಬೆಳ್ತಂಗಡಿ: ಮದ್ದಡ್ಕ ನೂತನ ಮಸೀದಿಗೆ ಶಿಲಾನ್ಯಾಸ

ಬೆಳ್ತಂಗಡಿ, ಮೇ 30: ಮದ್ದಡ್ಕದ ನೂರುಲ್‌ಹುದಾ ಜುಮ್ಮಾ ಮಸೀದಿಯನ್ನು ನೂತನವಾಗಿ ಮತ್ತು ಸಂಪೂರ್ಣ ಹವಾನಿಯಂತ್ರಿತವಾಗಿ ನಿರ್ಮಿಸಲು ಉದ್ದೇಶಿಸಿದ್ದು ಸದ್ರಿ ಕಾಮಗಾರಿಗೆ ದ.ಕ. ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸೈಯದ್ ಕೂರತ್ ತಂಙಳ್ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸೈಯದ್ ಸಾದಾತ್ ತಂಙಳ್, ಹಮೀದ್ ಫೈಝಿ ಕಿಲ್ಲೂರು, ಯಾಕೂಬ್ ಮುಸ್ಲಿಯಾರ್ ಪಣಕಜೆ, ಸುನ್ನೀ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಕೆ. ಬದ್ರುದ್ದೀನ್ ಪರಪ್ಪುಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಜಮಾಅತ್ ಸಮಿತಿ ಅಧ್ಯಕ್ಷ ರಾಝಿಯುದ್ದೀನ್ ಸಬರಬೈಲು, ನೂತನ ಮಸ್ಜಿದ್ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ಬೋನು ಮದ್ದಡ್ಕ, ಪ್ರಮುಖರಾದ ಉಸ್ಮಾನ್ ಹಾಜಿ, ಉಮರಬ್ಬ ಮದ್ದಡ್ಕ, ಅಶ್ರಫ್ ಚಿಲಿಂಬಿ, ಸಾಗರ್ ಮುಹಮ್ಮದ್ ಹಾಜಿ, ಹೈದರ್ ಮೇಸ್ತ್ರಿ, ಎಂ.ಎಚ್. ಅಬೂಬಕರ್, ಎಂ. ಹಸನಬ್ಬ, ಅಬ್ಬಾಸ್ ಸುಪಾರಿ ಅನಿಲ, ಸುಲೈಮಾನ್ ಹಾಜಿ ಬದ್ಯಾರ್, ರಹೀಂ ಚಿನ್ನು ಫಾಸ್ಟ್‌ಫುಡ್, ರಫೀಕ್ ಟಿಂಬರ್, ಅಬೂಸ್ವಾಲಿಹ್, ಆದಂ ಮೊದಲೆ, ಆರಿಫ್ ಬೆಂಗಳೂರು, ಎಂ.ಎ. ಬದ್ರುದ್ದೀನ್, ಎಂ.ಎ. ರಾಝುದ್ದೀನ್, ಎಸ್ಸೆಸ್ಸೆಫ್ ಡಿವಿಷನ್ ಎಕ್ಸ್‌ಕ್ಯೂಟಿವ್ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಸೇರಿದಂತೆ ಮದರಸದ ವಿದ್ಯಾರ್ಥಿಗಳು, ಮದ್ದಡ್ಕ ಮಸೀದಿ ಧರ್ಮಗುರು ಮುಹಮ್ಮದ್ ರಫೀಕ್ ಅಹ್‌ಸನಿ, ಲಾಡಿ ಖತೀಬ್ ಸೇರಿದಂತೆ ಜಮಾಅತ್‌ನ ಸದಸ್ಯರು ಉಪಸ್ಥಿತರಿದ್ದರು.







