ಟೆಸ್ಟ್ ನಲ್ಲಿ 10 ಸಾವಿರ ರನ್ ಪೂರ್ಣಗೊಳಿಸಿದ ಕುಕ್

ಚೆಸ್ಟರ್ ಲೆ ಸ್ಟ್ರೀಟ್, ಮೇ 30: ಶ್ರೀಲಂಕಾ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ನಾಲ್ಕನೆ ದಿನ ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅಲೆಸ್ಟೈರ್ ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
128ನೆ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕುಕ್ ಮೊದಲ ಇನಿಂಗ್ಸ್‌ನಲ್ಲಿ 15 ರನ್ ಗಳಿಸಿದ್ದರು. ಇದರೊಂದಿಗೆ ರನ್‌ನ್ನು 9,995ಕ್ಕೆ ಏರಿಸಿದ್ದ ಕುಕ್ ಎರಡನೆ ಇನಿಂಗ್ಸ್‌ನಲ್ಲಿ ಅವರು ನುವಾನ್ ಕುಲದೀಪ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವುದರೊಂದಿಗೆ ಹತ್ತು ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದರು.
ಕುಕ್ ಅವರು ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರ ವಯಸ್ಸು 31ವರ್ಷ ಮತ್ತು 157 ದಿನಗಳು. 128ನೆ ಟೆಸ್ಟ್ ಅಡುತ್ತಿರುವ ಕುಕ್ 28 ಶತಕ ಹಾಗೂ 47 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಕುಕ್ ಈ ಸಾಧನೆ ಮಾಡಿದ ವಿಶ್ವದ 12ನೆ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ,
Next Story





