ಪುದುಚೇರಿ; ನಾರಾಯಣಸಾಮಿಯಿಂದ ಸರಕಾರ ರಚನೆಗೆ ಅಹವಾಲು
ಪುದುಚೇರು, ಮೇ 30: ಕಾಂಗ್ರೆಸ್ ನಾಯಕ ವಿ.ನಾರಾಯಣಸಾಮಿ ಇಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರನ್ನು ಭೇಟಿಯಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರ ರಚಿಸುವ ಔಪಚಾರಿಕ ಅಹವಾಲನ್ನು ಮಂಡಿಸಿದ್ದಾರೆ.
ಅವರು, ಶನಿವಾರ 15 ಸದಸ್ಯ ಬಲದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. 30 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ ಇಬ್ಬರು ಡಿಎಂಕೆ ಶಾಸಕರ ಬೆಂಬಲವನ್ನು ಪಡೆದಿದೆ.
ನಾರಾಯಣಸಾಮಿ ಡಿಎಂಕೆಯ ಬೆಂಬಲ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡಿದ್ದಾರೆ.
ತಾನು, ಪುದುಚೇರಿ ಪಿಸಿಸಿ ಅಧ್ಯಕ್ಷ ನಮಶ್ಶಿವಾಯಂರೊಂದಿಗೆ ಇಂದು ದಿಲ್ಲಿಗೆ ಹೋಗಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದೇನೆಂದು ನಾರಾಯಣಸಾಮಿ ತಿಳಿಸಿದ್ದಾರೆ.
ಅತೀ ಶೀಘ್ರವೇ ಹೊಸ ಸರಕಾರ ರಚನೆಯಾಗಲಿದೆಯೆಂದು ಅವರು ಹೇಳಿದ್ದಾರೆ.
Next Story





