ಸಿಯೆಟ್ ಅವಾರ್ಡ್: ವಿರಾಟ್ ಕೊಹ್ಲಿ ವರ್ಷದ ಟ್ವೆಂಟಿ-20 ಆಟಗಾರ
ಮುಂಬೈ,, ಮೇ 30: ಹಾಲಿ ಹಾಗೂ ಮಾಜಿ ಆಟಗಾರರು ಉಪಸ್ಥಿತಿಯಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಿಯೆಟ್ ವರ್ಷದ ಟ್ವೆಂಟಿ-20 ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತದ ಮಾಜಿ ನಾಯಕ ದಿಲಿಪ್ ವೆಂಗ್‌ಸರ್ಕಾರ್‌ಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಜೋ ರೂಟ್ ಸಿಯೆಟ್ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಹಾಗೂ ವರ್ಷದ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ವರ್ಷದ ಅಂತಾರಾಷ್ಟ್ರೀಯ ಬೌಲರ್ ಪ್ರಶಸ್ತಿ ಹಾಗೂ ರೋಹಿತ್ ಶರ್ಮಗೆ ವರ್ಷದ ಭಾರತದ ಕ್ರಿಕೆಟಿಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನ್ಯೂಝಿಲೆಂಡ್‌ನ ಆಟಗಾರರಾದ ಕೇನ್ ವಿಲಿಯಮ್ಸನ್‌ಗೆ ವರ್ಷದ ಟೆಸ್ಟ್ ಕ್ರಿಕೆಟಿಗ ಹಾಗೂ ಮಾರ್ಟಿನ್ ಗಪ್ಟಿಲ್‌ಗೆ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಕೊಹ್ಲಿ ಪ್ರಸ್ತುತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ರವಿವಾರ ಕೊನೆಯ ಐಪಿಎಲ್-9ರಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿ ಆರೆಂಜ್ ಕ್ಯಾಪ್‌ನ್ನು ಗೆದ್ದುಕೊಂಡರು.
60ರ ಹರೆಯದ ವೆಂಗ್‌ಸರ್ಕಾರ್ 116 ಟೆಸ್ಟ್‌ಗಳಲ್ಲಿ 17 ಶತಕಗಳ ಸಹಿತ 6868 ರನ್ ಗಳಿಸಿದ್ದರು. ಲಾರ್ಡ್ಸ್ ಅಂಗಳದಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ ಶ್ರೇಯಸ್ಸು ಹೊಂದಿದ್ದಾರೆ.
ಸಿಯೆಟ್ ಅವಾರ್ಡ್ ವಿಜೇತರು
ಜೀವಮಾನ ಸಾಧನಾ ಪ್ರಶಸ್ತಿ: ದಿಲಿಪ್ ವೆಂಗ್‌ಸರ್ಕಾರ್
ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ: ಜೋ ರೂಟ್
ವರ್ಷದ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್:ಜೋ ರೂಟ್
ವರ್ಷದ ಅಂತಾರಾಷ್ಟ್ರೀಯ ಬೌಲರ್:ಆರ್.ಅಶ್ವಿನ್
ವರ್ಷದ ಟೆಸ್ಟ್ ಕ್ರಿಕೆಟಿಗ: ಕೇನ್ ವಿಲಿಯಮ್ಸನ್
ವರ್ಷದ ಏಕದಿನ ಕ್ರಿಕೆಟಿಗ: ಮಾರ್ಟಿನ್ ಗಪ್ಟಿಲ್
ವರ್ಷದ ಟ್ವೆಂಟಿ-20 ಆಟಗಾರ: ವಿರಾಟ್ ಕೊಹ್ಲಿ







