Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪೊಲೀಸರ ಪ್ರತಿಭಟನೆ: ಎಷ್ಟು ಸರಿ? ಎಷ್ಟು...

ಪೊಲೀಸರ ಪ್ರತಿಭಟನೆ: ಎಷ್ಟು ಸರಿ? ಎಷ್ಟು ತಪ್ಪು?

ವಾರ್ತಾಭಾರತಿವಾರ್ತಾಭಾರತಿ30 May 2016 11:53 PM IST
share
ಪೊಲೀಸರ ಪ್ರತಿಭಟನೆ: ಎಷ್ಟು ಸರಿ? ಎಷ್ಟು ತಪ್ಪು?

ಇತ್ತೀಚೆಗೆ ಮಂಗಳೂರಿನ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆಯಿತು. ಇಲ್ಲಿನ ಸರ್ಕಲ್ ಇನ್‌ಸ್ಪೆಕ್ಟರ್ ಒಬ್ಬರು ಆರೋಪಿಯೊಬ್ಬನನ್ನು ಅನಧಿಕೃತವಾಗಿ ಬಂಧಿಸಿದ ಪ್ರಕರಣದಲ್ಲಿ ಆಯುಕ್ತರು ಸರ್ಕಲ್ ಇನ್‌ಸ್ಪೆಕ್ಟರ್‌ನನ್ನು ರಜೆಯ ಮೇಲೆ ಕಳುಹಿಸಿದ್ದಲ್ಲದೆ, ಆತನನ್ನು ಜನರ ಒತ್ತಡದ ಮೇರೆಗೆ ವರ್ಗಾವಣೆ ಮಾಡಲು ಮುಂದಾದರು. ಆದರೆ ಆತನ ಪರವಾಗಿ ಸ್ಥಳೀಯ ಕೆಲವು ಪೊಲೀಸರು ಒಂದಾಗಿ ಪ್ರತಿಭಟನೆಗೆ ನಿಂತರು. ಅವರ ವರ್ಗಾವಣೆಯನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿ, ಕರ್ತವ್ಯದಿಂದ ವಿಮುಖರಾದರು. ಅಂತಿಮವಾಗಿ, ಸಿಐಯನ್ನು ವರ್ಗಾವಣೆ ಮಾಡಿಯೇ ಇಲ್ಲ ಎಂದು ಆಯುಕ್ತರು ಹೇಳಿಕೆ ನೀಡಬೇಕಾಯಿತು. ಒಟ್ಟಿನಲ್ಲಿ ತಳಸ್ತರದಲ್ಲಿರುವ ಪೊಲೀಸರೂ ಹೇಗೆ ರಾಜಕೀಯ ಹಿತಾಸಕ್ತಿಯನ್ನು ಹೊಂದಿದ್ದಾರೆ ಎನ್ನುವುದನ್ನು ಇದು ಬೆಳಕಿಗೆ ತಂದಿತು. ಈ ಪ್ರತಿಭಟನೆಯನ್ನು ಸಂಘಟಿಸಿದ್ದೇ ಸ್ಥಳೀಯ ಸಂಘಪರಿವಾರದ ಮುಖಂಡರು ಎಂಬ ಆರೋಪವೂ ಇದೆ. ಅಂತೂ, ಪೊಲೀಸರು ತಮ್ಮ ಕರ್ತವ್ಯಕ್ಕೆ ಹೊರತಾದ ರಾಜಕೀಯದಲ್ಲಿ ಹೇಗೆ ಸಿಲುಕಿಕೊಂಡಿದ್ದಾರೆ ಮತ್ತು ತಮ್ಮ ಕರ್ತವ್ಯಕ್ಕಿಂತಲೂ ಹೇಗೆ ಈ ರಾಜಕೀಯದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇದು ಕೇವಲ ಮಂಗಳೂರಿಗೆ ಸೀಮಿತವಾಗಿಲ್ಲ. 

ರಾಜ್ಯಾದ್ಯಂತ ತಳಸ್ತರದ ಮುಖ್ಯವಾಗಿ ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್ ಮಟ್ಟದ ಪೊಲೀಸರು ಸಂಘಪರಿವಾರ ರಾಜಕಾರಣದ ಜೊತೆಗೆ ಗುರುತಿಸಲ್ಪಡುತ್ತಿರುವುದು ಮತ್ತು ಕಾನೂನಿನ ದಿಕ್ಕು ತಪ್ಪಿಸುವಲ್ಲಿ ನೇರ ಪಾತ್ರವಹಿಸುವುದರ ಬಗ್ಗೆ ಭಾರೀ ಆರೋಪಗಳು ಕೇಳಿ ಬರುತ್ತಿವೆ. ಅನೇಕ ಸಂದರ್ಭಗಳಲ್ಲಿ ಇದು ಮೇಲಧಿಕಾರಿಗಳ ನಡುವಿನ ತಿಕ್ಕಾಟಗಳಿಗೂ ಕಾರಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ತಳಸ್ತರದ ಕೆಲ ಪೊಲೀಸ್ ತಂಡಗಳು ತಮಗೆ ಅನ್ಯಾಯವಾಗುತ್ತಿವೆ ಎಂದು ಪ್ರತಿಭಟನೆ ನಡೆಸಲು ಹೊರಟಿವೆ. ಜೂ.4ರಂದು ಸಾಮೂಹಿಕವಾಗಿ ಗೈರು ಹಾಜರಾಗಲು ತೀರ್ಮಾನಿಸಿವೆ. ಅಂದರೆ, ನೇರವಾಗಿ ಕಾನೂನನ್ನು ಅಸ್ತವ್ಯಸ್ತಗೊಳಿಸುವ ಬೆದರಿಕೆಯೊಡ್ಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ತಂತ್ರಕ್ಕೆ ಮುಂದಾಗಿದೆ. ಇದು ಯಶಸ್ವಿಯಾದರೆ ಈ ಹಾದಿಯನ್ನು ಸೈನಿಕರೂ ಅನುಸರಿಸುವ ದಿನ ದೂರವಿಲ್ಲ. ಸಾಧಾರಣವಾಗಿ ಪೊಲೀಸ್ ಇಲಾಖೆಯ ತಳಸ್ತರದ ಕೆಲಸವನ್ನು ನಿರ್ವಹಿಸುವ ಸಿಬ್ಬಂದಿಯೆಲ್ಲ ಕೆಳವರ್ಗಗಳಿಂದ ಬಂದವರು ಎನ್ನುವುದು ಗಮನಾರ್ಹವಾದುದು. ಬಡತನ ಮತ್ತು ಕೆಳ ಜಾತಿಯ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಕಾನ್‌ಸ್ಟೇಬಲ್‌ಗಳಂತಹ ಹುದ್ದೆಗೆ ಸೇರ್ಪಡೆಗೊಳ್ಳುತ್ತಾರೆ.

ಇವರಲ್ಲಿ ಹೆಚ್ಚಿನವರ ವಿದ್ಯಾರ್ಹತೆ ಎಸೆಸೆಲ್ಸಿ ಅಥವಾ ಪಿಯುಸಿ. ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಶ್ರಮ ಮತ್ತು ಕಠಿಣ ಸನ್ನಿವೇಶಗಳನ್ನು ಎದುರಿಸುವವರೂ ಇವರೇ ಆಗಿದ್ದಾರೆ. ಇದೇ ಸಂದರ್ಭದಲ್ಲಿ, ನ್ಯಾಯ ವ್ಯವಸ್ಥೆಯ ತಳಹದಿಯೂ ಇವರೇ ಆಗಿದ್ದಾರೆ. ಯಾವುದೇ ಒಂದು ಅಪರಾಧ ಪ್ರಕ್ರಿಯೆಯ ತನಿಖೆ ಯಶಸ್ವಿ ಕಾಣಬೇಕಾದರೆ, ಈ ತಳಸ್ತರದ ಸಿಬ್ಬಂದಿಗಳ ಕಾರ್ಯ ಕೌಶಲ್ಯ ಪ್ರಧಾನ ಪಾತ್ರವಹಿಸುತ್ತದೆ. ಈ ಕಾರಣದಿಂದಲೇ ಇವರ ಹುದ್ದೆಯನ್ನು ಯಾವ ರೀತಿಯಲ್ಲೂ ಹಗುರವಾಗಿ ಸರಕಾರ ಪರಿಗಣಿಸುವಂತಿಲ್ಲ. ಇದೇ ಸಂದರ್ಭದಲ್ಲಿ, ಈ ಸಿಬ್ಬಂದಿಗಳನ್ನು ಕೆಲವು ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಸಮಾಜ ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುಖ್ಯವಾಗಿ ಆರೆಸ್ಸೆಸ್ ಶಾಖೆಯಲ್ಲಿ ಬಡ, ಕೆಳಜಾತಿಯ ಹುಡುಗರನ್ನು ತರಬೇತುಗೊಳಿಸಿ, ಅವರಲ್ಲಿ ತಪ್ಪು ಮಾಹಿತಿಗಳನ್ನು, ತಪ್ಪು ಅರಿವುಗಳನ್ನು ತುಂಬಿ, ಪೊಲೀಸ್ ಇಲಾಖೆಗೆ ಸೇರಿಸಲಾಗುತ್ತದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿವೆ. ಒಂದೆಡೆ ಜನರ ತೆರಿಗೆಯ ಹಣವನ್ನು ಸಂಬಳವಾಗಿ ಪಡೆದುಕೊಂಡೆ, ಇವರು ಆರೆಸ್ಸೆಸ್, ಬಜರಂಗದಳಗಳಂತಹ ಸಂಘಟನೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ ಎನ್ನುವ ದೂರು ಇಂದು ನಿನ್ನೆಯದಲ್ಲ. ಇವುಗಳನ್ನು ಪೊಲೀಸ್ ಇಲಾಖೆಯಾಗಲಿ, ಸರಕಾರವಾಗಲಿ ಈವರೆಗೆ ಗಂಭೀರವಾಗಿ ತೆಗೆದುಕೊಂಡಂತಿಲ್ಲ. 

ಇತ್ತೀಚೆಗೆ ಟಿವಿ ಚಾನೆಲ್ ಒಂದರಲ್ಲಿ ಶಾಸಕರೊಬ್ಬರು ಬಹಿರಂಗವಾಗಿ ‘‘ಶೇ. 60ರಷ್ಟು ಸಂಘಪರಿವಾರದ ಹುಡುಗರು ಪೊಲೀಸ್ ಇಲಾಖೆಯಲ್ಲಿ ಇದ್ದಾರೆ’’ ಎಂದು ಹೇಳಿರುವುದನ್ನು ಮತ್ತು ಅದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಹೀಗೆ, ಪೊಲೀಸ್ ಇಲಾಖೆಯ ತಳಸ್ತರದ ಸಿಬ್ಬಂದಿ ಕೆಲವು ರಾಜಕೀಯ ಸಿದ್ಧಾಂತಗಳ ಜೊತೆಗೆ ಬಹಿರಂಗವಾಗಿಯೇ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸದ್ಯದ ಪೊಲೀಸರ ಈ ಪ್ರತಿಭಟನೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾದುದು ಎನ್ನುವುದನ್ನು ನಾವು ಚರ್ಚಿಸಲೇಬೇಕಾಗುತ್ತದೆ. ಪೊಲೀಸರಿಗೆ ಸಮಸ್ಯೆ ಇಲ್ಲವೆಂದು ಇದರರ್ಥವಲ್ಲ. ರಜೆಯ ವಿಷಯದಲ್ಲಿ ಪೊಲೀಸರು ಮತ್ತು ಮೇಲಧಿಕಾರಿಗಳ ನಡುವಿನ ತಿಕ್ಕಾಟ ಇಂದು ನಿನ್ನೆಯದಲ್ಲ. ಆದರೆ ಇಡೀ ಪೊಲೀಸ್ ಇಲಾಖೆಯ ಕರ್ತವ್ಯದ ಸ್ವರೂಪವೇ ರಜೆಗೆ ಪೂರಕವಾಗಿಲ್ಲದಿರುವುದರಿಂದ ಮತ್ತು ಇದನ್ನು ಅರಿತೇ ಪೊಲೀಸ್ ಇಲಾಖೆಗೆ ಸೇರಿರುವುದರಿಂದ ಅದಕ್ಕೊಂದು ಸ್ಪಷ್ಟ ಪರಿಹಾರವನ್ನು ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಅದೇ ಸಂದರ್ಭದಲ್ಲಿ ರಜೆಗಳಿಗೆ ವೇತನವನ್ನು ಸರಕಾರ ಪಾವತಿಸುತ್ತಿದೆ. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಹತೆಯನ್ನು ಪಡೆದು ಕೆಲಸಕ್ಕೆ ಸೇರುವ ಯಾವ ಇಲಾಖೆಯ ಸಿಬ್ಬಂದಿಗೂ ಆರಂಭದಲ್ಲೇ 18 ಸಾವಿರ ರೂ. ವೇತನವಿರುವುದಿಲ್ಲ.

ಪಕ್ಕದ ಆಂಧ್ರದಂತಹ ರಾಜ್ಯಗಳಿಗೆ ಹೋಲಿಸಿದರೆ ಈ ವೇತನ ಕಡಿಮೆಯೇ ಹೌದು. ಆದರೆ ರಾಜ್ಯದ ಸರಕಾರಿ ಸಿಬ್ಬಂದಿಯ ವೇತನದ ಸರಾಸರಿಯನ್ನು ತೆಗೆದುಕೊಂಡಾಗ ಇದು ತೀರಾ ಕಡಿಮೆಯೇನೂ ಅಲ್ಲ. ಹಾಗೆಯೇ ಪೊಲೀಸರಿಗೆ ಸಿಗುವ ಸವಲತ್ತು ಉಳಿದ ಯಾವ ಸಿಬ್ಬಂದಿಗೂ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಕೆಲಸದ ಅವಧಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಸುಮಾರು 50 ಲಕ್ಷ ರೂ.ವರೆಗೆ ಪರಿಹಾರವಿದೆ. ಅಂತೆಯೇ ಕುಟುಂಬದ ಸದಸ್ಯನಿಗೆ ಉದ್ಯೋಗವನ್ನೂ ನೀಡಲಾಗುತ್ತದೆ. ವಸತಿ ಸೌಲಭ್ಯ ಇತ್ಯಾದಿ ಸೌಲಭ್ಯಗಳು ಯಾವುದೇ ಖಾಸಗಿ ನೌಕರರಿಗಿಂತ ಕಡಿಮೆಯೇನೂ ಇಲ್ಲ. ಹೀಗಿದ್ದರೂ ಅವರು ನಿರ್ವಹಿಸುವ ಕೆಲಸಕ್ಕೆ ಹೋಲಿಸಿದರೆ ಇವೆಲ್ಲವೂ ಕಡಿಮೆಯೆಂದೇ ತಿಳಿದುಕೊಳ್ಳೋಣ. ಆದರೆ ಅದನ್ನು ವ್ಯಕ್ತಪಡಿಸಲು ಹೀಗೆ ಏಕಾಏಕಿ ರಜೆ ಘೋಷಿಸುವುದು ಖಂಡಿತ ಪರಿಹಾರವಲ್ಲ. ಇದೊಂದು ರೀತಿಯ ಬ್ಲಾಕ್‌ಮೇಲ್ ತಂತ್ರ. ಇಡೀ ವ್ಯವಸ್ಥೆಯನ್ನು ಅತಂತ್ರಕ್ಕೆ ನೂಕಿ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ವಕ್ರ ದಾರಿ. ಕಾನೂನು ಪ್ರಕಾರವೂ ಇದು ಅಪರಾಧ. ರಜೆಗೆ, ವೇತನಕ್ಕೆ ಸಂಬಂಧ ಪಟ್ಟು ಮೇಲಧಿಕಾರಿಗಳಿಗೆ ತಳಸ್ತರದ ಸಿಬ್ಬಂದಿ ಈವರೆಗೆ ಯಾವುದೇ ಮನವಿ ಸಲ್ಲಿಸಿದ, ಬೇಡಿಕೆಯನ್ನು ಸರಕಾರದವರೆಗೆ ತಲುಪಿಸಿದ ಉದಾಹರಣೆಗಳಿಲ್ಲ. ಸದ್ಯದ ಪ್ರತಿಭಟನೆಯ ಹಿಂದಿರುವವರು ಯಾರು? ಅವರ ಹಿನ್ನೆಲೆಯೇನು? ಅವರು ಯಾವುದಾದರೂ ರಾಜಕೀಯದೊಂದಿಗೆ ಸಂಬಂಧವನ್ನು ಹೊಂದಿದ್ದಾರೆಯೇ? ಎನ್ನುವುದು ಹೆಚ್ಚಿನ ಪೊಲೀಸ್ ಸಿಬ್ಬಂದಿಗೇ ಗೊತ್ತಿಲ್ಲ. ಯಾವುದೇ ಸ್ಪಷ್ಟ ಚೌಕಟ್ಟಿಲ್ಲದೆ, ಸ್ಪಷ್ಟ ನಾಯಕರಿಲ್ಲದೆ ಏಕಾಏಕಿ ಪ್ರತಿಭಟನೆಯನ್ನು ಘೋಷಿಸುವುದನ್ನು ನಾವು ವ್ಯವಸ್ಥೆಯೊಳಗಿನ ಬಂಡಾಯ ಎಂದು ಘೋಷಿಸಬಹುದೇ ಹೊರತು, ಅದನ್ನು ಪ್ರಜಾಸತ್ತಾತ್ಮಕವೆಂದು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂದು ಪೊಲೀಸ್ ಇಲಾಖೆ ಪ್ರಭುತ್ವದ ಜೊತೆಗೆ ನೇರವಾಗಿ ಗುರುತಿಸಲ್ಪಡುತ್ತಿದೆ.

ಪ್ರಭುತ್ವ ನೀಡುವ ಅಧಿಕಾರದ ಸಕಲ ಅವಕಾಶವನ್ನು ಪೊಲೀಸ್ ಕಾನ್‌ಸ್ಟೇಬಲ್‌ಗಳು ಪಡೆದುಕೊಳ್ಳುತ್ತಿದ್ದಾರೆ. ಜನರ ಪ್ರಜಾಸತ್ತಾತ್ಮ ಪ್ರತಿಭಟನೆಗಳನ್ನು ಇತ್ತೀಚಿನ ದಿನಗಳಲ್ಲಿ ಈ ಸಿಬ್ಬಂದಿ ಹೇಗೆ ದಮನಿಸಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಸರಕಾರ ಪೊಲೀಸ್ ಸಿಬ್ಬಂದಿಯನ್ನು ಸಾಕುವುದು ಜನಸಾಮಾನ್ಯರ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಬಗ್ಗು ಬಡಿಯುವುದಕ್ಕಾಗಿ ಎಂಬ ನಂಬಿಕೆ ಜನರಲ್ಲಿ ಮೂಡುತ್ತಿದೆ. ಇಂತಹ ಹೊತ್ತಿನಲ್ಲಿ, ಪೊಲೀಸರು ತಮ್ಮ ಬೇಡಿಕೆಗಳನ್ನು ತಮ್ಮನ್ನು ಸಾಕುವ ಸರಕಾರದ ಜೊತೆಗೆ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕೇ ಹೊರತು, ಅನಗತ್ಯವಾಗಿರುವ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡುವ ಮೂಲಕ ಅಲ್ಲ. ಈ ಸಂದರ್ಭಕ್ಕಾಗಿಯೇ ಹಲವು ಸಂವಿಧಾನ ವಿರೋಧಿ ಶಕ್ತಿಗಳು ಹೊಂಚು ಹಾಕಿ ಕಾದಿರುತ್ತವೆ ಎನ್ನುವ ಎಚ್ಚರಿಕೆ ಪೊಲೀಸರಿಗೆ ಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X