ಶಿರ್ವ, ಮೇ 30: ಶಿರ್ವ ಗ್ರಾಮದ ಚಕ್‌ಪಾದೆಯ ನಾರಾಯಣ ಗುರು ದೇವಸ್ಥಾನ ಬಳಿಯ ಹಾಡಿಯಲ್ಲಿ ರವಿವಾರ ಅಪರಾಹ್ನ ಜುಗಾರಿ ಆಡುತ್ತಿದ್ದ ವಿನಾಯಕ, ಮಹೇಶ, ಶಿವಾನಂದ, ಭೀಮಪ್ಪ ಹಾಗೂ ಅಶ್ರಫ್ ಎಂಬವರನ್ನು ಪೊಲೀಸರು ಬಂಧಿಸಿದ್ದು, 2,250 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.