ಅಕ್ರಮ ಮರಳು ಸಾಗಾಟ 6 ದೋಣಿ, 15 ಟಿಪ್ಪರ್‌ಗಳ ವಶ
ಕಾಸರಗೋಡು, ಮೇ 30: ಅಕ್ರಮ ಮರಳು ಸಾಗಾಟದ ವಿರುದ್ಧ ಕಾಸರಗೋಡು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, 6 ದೋಣಿ ಮತ್ತು 15 ಟಿಪ್ಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಗ್ರಾಲ್ ಪುತ್ತೂರು ಸೇತುವೆ ಬಳಿ ಮರಳುಗಾರಿಕೆಯಲ್ಲಿ ತೊಡಗಿದ್ದ ಆರು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತಳಂಗರೆ, ಬಾಂಗೋಡು, ಮೊಗ್ರಾಲ್ ಪುತ್ತೂರು, ತುರುತ್ತಿ, ಚೇರಂಗೈ ಮೊದಲಾದೆಡೆಗಳಿಂದ 15 ಟಿಪ್ಪರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಕ್ಕೆ ತೆಗೆದುಕೊಂಡ ದೋಣಿಗಳನ್ನು ಜೆಸಿಬಿ ಬಳಸಿ ಪೊಲೀಸರು ಧ್ವಂಸಗೊಳಿಸಿದ್ದಾರೆ.
Next Story





