ಮಹಾರಾಷ್ಟ್ರದ ವರ್ಧಾ ಆರ್ಮಿ ಡೀಪೊದಲ್ಲಿ ಸ್ಫೋಟ; 18 ಯೋಧರು ಸಾವು
![ಮಹಾರಾಷ್ಟ್ರದ ವರ್ಧಾ ಆರ್ಮಿ ಡೀಪೊದಲ್ಲಿ ಸ್ಫೋಟ; 18 ಯೋಧರು ಸಾವು ಮಹಾರಾಷ್ಟ್ರದ ವರ್ಧಾ ಆರ್ಮಿ ಡೀಪೊದಲ್ಲಿ ಸ್ಫೋಟ; 18 ಯೋಧರು ಸಾವು](https://www.varthabharati.in/sites/default/files/images/articles/2016/05/31/depot-fire.jpg)
ನಾಗ್ಪುರ, ಮೇ 31: ಮಹಾರಾಷ್ಟ್ರದ ಪುಲ್ಗಾಂವ್ ವರ್ಧಾ ಬಳಿಯ ಸೇನಾ ಯುದ್ದ ಸಾಮಗ್ರಿ ಶೇಖರಣೆ ಡೀಪೊದಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ ಕನಿಷ್ಠ 18 ಮಂದಿ ಯೋಧರು ಮೃತಪಟ್ಟಿದ್ದಾರೆ.
ಭಾರತದ ಅತಿದೊಡ್ಡ ಯುದ್ದ ಸಾಮಗ್ರಿ ಶೇಖರಣೆ ಡೀಪೊ ದಲ್ಲಿ ಸಂಭವಿಸಿದ ದುರಂತದಲ್ಲಿ 19 ಮಂದಿ ಯೋಧರು ಗಾಯಗೊಂಡಿದ್ದಾರೆ. ಸ್ಥಳದ ಆಸುಪಾಸಿನ 3ಗ್ರಾಮಗಳ ಜನರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆ ಸ್ಥಳಕ್ಕೆ ರವಾನಿಸಲಾಗಿದೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story