ಕಡಬ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ
ಕಡಬ, ಮೇ 31: ಕೊಲ ಗ್ರಾಮದ ವಳಕಡಮ ಕುಮಾರಧಾರ ನದಿ ತಟದಲ್ಲಿ ನಡೆಯುತ್ತಿದ್ದ ಮರಳು ಅಕ್ರಮ ಅಡ್ಡೆಗೆ ಗಣಿ ಇಲಾಖಾಧಿಕಾರಿಗಳು, ಕಡಬ ಪೊಲೀಸರು ದಾಳಿ ನಡೆಸಿ ಮರಳುಗಾರಿಕೆಗೆ ಬಳಸುತ್ತಿದ್ದ ಹಿಟಾಚಿ, ದಾಸ್ತಾನು ಇರಿಸಲಾಗಿದ್ದ ಮರಳನ್ನು ವಶಪಡಿಸಿಕೊಂಡು ಹಿಟಾಚಿ ವಾರಸುದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಗಣಿ ಇಲಾಖಾಧಿಕಾರಿ ಮೋಹನ್ ಹಾಗೂ ಕಡಬ ಎಸ್ಸೈ ಉಮೇಶ್ ಉಪ್ಪಳಿಕೆ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
ಈ ಸಂದರ್ಭ ಮರಳು ತೆಗೆಯಲು ಬಳಸುತ್ತಿದ್ದ ವಳಕಡಮ ನಾರಯಣ ಎಂಬುವವರಿಗೆ ಸೇರಿದ ಹಿಟಾಚಿ ಮತ್ತು ಪಕ್ಕದಲ್ಲಿನ ವಳಕಡಮ ಮೋನಪ್ಪ ಎಂಬುವವರ ಮನೆಯ ಅಂಗಳದಲ್ಲಿ ದಾಸ್ತಾನು ಇರಿಸಲಾಗಿದ್ದ ಸುಮಾರು 20 ಲೋಡು ಮರಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಹಿಟಾಚಿ ವಾರಸುದಾರ ನಾರಾಯಣ ಎಂಬುವವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





