Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತೋಳೇರಿಸಿದ ಗುಂಡೂರಾವ್,ತಲೆಮೇಲೆ ಕೈ...

ತೋಳೇರಿಸಿದ ಗುಂಡೂರಾವ್,ತಲೆಮೇಲೆ ಕೈ ಹೊತ್ತ ಅರಸು!

ನಿರೂಪಣೆ:ಬಸು ಮೇಗಲ್ಕೇರಿನಿರೂಪಣೆ:ಬಸು ಮೇಗಲ್ಕೇರಿ31 May 2016 11:48 PM IST
share
ತೋಳೇರಿಸಿದ ಗುಂಡೂರಾವ್,ತಲೆಮೇಲೆ ಕೈ ಹೊತ್ತ ಅರಸು!

ಮುಖ್ಯಮಂತ್ರಿಯಾಗಿ ಗುಂಡೂರಾವ್ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಶಾಸನ ಸಭೆಯದು. ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರ ಭಾಷಣ. ಆ ಭಾಷಣದ ಮೇಲೆ ಅರಸು ಪಕ್ಷದ ಶಾಸಕರಾದ ಜೆ.ಎಚ್. ಪಟೇಲ್ ಮಾತನಾಡುತ್ತಿದ್ದರು. ಮಾತನಾಡುವಾಗ ಪಟೇಲರು ಸಹಜಞವಾಗಿಯೇ, ಅವರ ಮೊನಚು ವ್ಯಂಗ್ಯಭರಿತ ಮಾತುಗಳಿಂದ ಮುಖ್ಯಮಂತ್ರಿ ಗುಂಡೂರಾಯರನ್ನು ಕಿಚಾಯಿಸಿದರು. ಅಷ್ಟಕ್ಕೇ ಸಹನೆ ಕಳೆದುಕೊಂಡ ಗುಂಡೂರಾವ್, ಕೂತಿದ್ದ ಕುರ್ಚಿಯಿಂದ ಎದ್ದು ಸದನದ ಬಾವಿಗಿಳಿದು, ಶರ್ಟಿನ ತೋಳು ಮಡಿಚಿ ಪಟೇಲರತ್ತ ಎಗರಿ ಹೋದರು, ಕದನಕ್ಕೆ ಆಹ್ವಾನಿಸಿದರು. ಸದನದಲ್ಲಿ ಗದ್ದಲವೋ ಗದ್ದಲ.

ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯೊಬ್ಬ, ಆ ಸ್ಥಾನದ ಘನತೆ ಗೌರವವನ್ನು ಗಾಳಿಗೆ ತೂರಿ, ಸದನದ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿ, ಬೀದಿ ಬದಿಯ ಸಾಮಾನ್ಯನಂತೆ ತೋಳೇರಿಸಿ ಜಗಳಕ್ಕೆ ನಿಂತದ್ದು, ಪ್ರಜಾಸತ್ತಾತ್ಮಕ ಸಂವಿಧಾನಕ್ಕೆ ಮಾಡುವ ಅಪಚಾರ. ಹಿಂದೆಂದೂ ಕಾಣದ ಈ ದೃಶ್ಯ ಕಂಡ ಶಾಸನ ಸಭೆ ಬೆಕ್ಕಸ ಬೆರಗಾಯಿತು. ಇದೆಲ್ಲವನ್ನು ನೋಡುತ್ತಿದ್ದ ದೇವರಾಜ ಅರಸು, ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟರು. ಎದ್ದು ನಿಂತು ಮಾತನಾಡಬೇಕಿದ್ದವರು, ಮಾತೇ ಹೊರಡದ ಮೂಕರಂತಾದರು.
ನಾನು ಪರಿಷತ್ತಿನಲ್ಲಿದ್ದೆ, ವಿಷಯ ಗೊತ್ತಾಯಿತು. ಸೀದಾ ಸಿಎಂ ಚೇಂಬರ್‌ಗೆ ಹೋದೆ, ಗುಂಡೂರಾವ್ ಕೂತಿದ್ದರು, ‘‘ಯಾಕಿಂಗೆ ಮಾಡಕೊಂಡ್ರಿ’’ ಎಂದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅರಸು ತಲೆ ಮೇಲೆ ಕೈ ಹೊತ್ತು ಕೂತಿದ್ದು ಭಾರೀ ಅವಮಾನವಾದಂತೆ ಭಾಸವಾಗಿತ್ತು. ಅದನ್ನವರು ಹೇಳಿಕೊಂಡರು. ನಾನು, ‘‘ನೀವೇನೂ ಯೋಚಿಸಬೇಡಿ. ಅರಸ ರೊಂದಿಗೆ ನಾನು ಮಾತನಾಡುತ್ತೇನೆ, ಅವರೇನು ಹೇಳುತ್ತಾರೋ ಅದಕ್ಕೆ ನೀವು ಸಿದ್ಧರಿರಬೇಕು’’ ಎಂದು ಹೇಳಿ ಒಪ್ಪಿಸಿದೆ. ನಾನು ರೋಷನ್ ಬೇಗ್ ಜೊತೆಗೂಡಿ ಅರಸು ಮನೆಗೆ ಹೋದೆವು. ಊಟ ಮಾಡುತ್ತಿದ್ದರು, ಕರೆದರು. ನಾವು ಬೇಡ ಎಂದೆವು. ‘‘ಮಜ್ಜಿಗೇನಾದರೂ ಕುಡೀರಪ್ಪ’’ ಎಂದರು. ನಂತರ ಅರಸು, ‘‘ಏನಪ್ಪ, ಅಸೆಂಬ್ಲಿಯನ್ನು ನಾನು 1942ರಿಂದ, ಮಹಾರಾಜರ ಕಾಲದಿಂದಲೂ ಒಂದೇ ಒಂದು ದಿನವೂ ತಪ್ಪಿಸಿಕೊಂಡವನಲ್ಲ, ನನ್ನ ಎದುರಿಗೇ ಈ ಘಟನೆ ನಡೀತಲ್ಲ, ಯಾವ ಮುಖ್ಯಮಂತ್ರಿಗೂ ಶೋಭೆ ತರುವಂಥದ್ದಲ್ಲ. ಇನ್ನೂ ಚಿಕ್ಕ ವಯಸ್ಸು, ಸಂಯಮ ಕಳೆದುಕೊಂಡರೆ ಪ್ರಜಾಪ್ರಭುತ್ವ ಏನಾಗಬೇಕು, ಬಡವರಿಗೆ ಹೇಗಪ್ಪ ಸೇವೆ ಮಾಡ್ತೀರಿ, ಸಮಸ್ಯೆ ಬಗೆಹರಿಸುವ ಬಗೆ ಹೇಗೆ... ಇಲ್ಲಪ್ಪ, ನನಗೆ ಅಸೆಂಬ್ಲಿನಲ್ಲಿ ಕೂರಲಿಕ್ಕೆ ಆಗಲ್ಲ, ನಾನು ಬರಲ್ಲ’’ ಎಂದುಬಿಟ್ಟರು. ರಸು ಎಷ್ಟು ಬೇಸರಗೊಂಡಿದ್ದ ರೆಂದರೆ, ಮುಖ್ಯಮಂತ್ರಿ ಪದವಿ ಕಳೆದುಕೊಂಡ ವ್ಯಥೆಯಲ್ಲ, ಎಂಥವರ ಕೈಗೆ ನಾಡಿನ ಜನರ ಉಸ್ತುವಾರಿ ಕೊಟ್ಟೆ ಎಂಬ ಕೊರಗು ಕಾಡುತ್ತಿತ್ತು. ನಾನು, ‘‘ಮುಖ್ಯಮಂತ್ರಿಗಳಿಗೆ ಹೇಳಿ ಬಂದಿದ್ದೇನೆ, ನೀವು ಏನು ಹೇಳಿದರೂ ಒಪ್ಪಿಕೊಳ್ಳುವಂತೆ ಒಪ್ಪಿಸಿ ಬಂದಿದ್ದೇನೆ, ಅಸೆಂಬ್ಲಿಗೆ ಬರಲ್ಲ ಅಂತ ಮಾತ್ರ ಹೇಳಬೇಡಿ’’ ಎಂದು ಮನವಿ ಮಾಡಿಕೊಂಡೆ. ಅರಸು ಒಪ್ಪಿ, ಸದನಕ್ಕೆ ಬಂದರು. ಆದರೆ ಅಲ್ಲಿನ ಸ್ಥಿತಿಯೇ ಬೇರೆಯಾಗಿತ್ತು. ವಿರೋಧಪಕ್ಷದವರು ಬಹಳ ದೊಡ್ಡ ಮಟ್ಟದಲ್ಲಿ ಧರಣಿ ಕೂತು, ಮುಖ್ಯಮಂತ್ರಿ ಗುಂಡೂರಾವ್‌ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು. ಪರಿಸ್ಥಿತಿ ಕೈ ಮೀರಿಹೋಗಿತ್ತು. ಗುಂಡೂರಾಯರ ಪರವಾಗಿ ನಿಂತು ಸಮರ್ಥಿಸಿಕೊಳ್ಳುವ ಮಾನವಂತರ ಕೊರತೆ ಎದ್ದು ಕಾಣುತ್ತಿತ್ತು. ಸಮಯದಲ್ಲಿ ಅರಸು, ಸ್ಪೀಕರ್ ಬಳಿ ಹೋಗಿ, ‘‘ನಿಮ್ಮ ಚೇಂಬರ್‌ಗೆ ಮುಖ್ಯಮಂತ್ರಿಗಳನ್ನು ಕರೆಸಿ, ವಿರೋಧಪಕ್ಷದವರಾದ ನಾವೂ ಬರುತ್ತೇವೆ, ಇದನ್ನು ಇಲ್ಲಿಗೇ ಮುಗಿಸೋಣ’’ ಎಂದರು. ಸ್ಪೀಕರ್ ಸಿಎಂ ಗುಂಡೂರಾಯರನ್ನು ಕರೆಸಿದರು. ಒಬ್ಬ ಹಿರಿಯ ಅಣ್ಣನಂತೆ ಅರಸು, ‘‘ಸಿಎಂ ಆಗಿದ್ದೀಯಾ, ನನಗೆ ಹೊಟ್ಟೆಕಿಚ್ಚಿಲ್ಲ, ಜೀವನದಲ್ಲಿ ಎಲ್ಲರಿಗೂ ಅವಕಾಶ ಸಿಗಲ್ಲ, ಸಿಕ್ಕಾಗ ಸದ್ವಿನಿಯೋಗ ಮಾಡಿಕೋಬೇಕು, ಮುಖ್ಯಮಂತ್ರಿಯಾಗಿರುವವರು ಯಾವಾಗಲು ಮಾತಿನಲ್ಲಾಗಲಿ, ಕೃತಿಯಲ್ಲಾಗಲಿ ಲಕ್ಷ್ಮಣರೇಖೆ ದಾಟಬಾರದು, ಪ್ರಜಾಪ್ರಭುತ್ವ ಉಳೀಬೇಕು, ವೌಲ್ಯಗಳನ್ನು ಕಾಪಾಡಿಕೊಳ್ಳಬೇಕು’’ ಎಂದು ಬುದ್ಧಿವಾದ ಹೇಳಿದರು. ರಸರ ಮಾತಿಗೆ ಮರುಮಾತಾಡದ ಗುಂಡೂರಾವ್, ಅಲ್ಲಿಂದ ನೇರವಾಗಿ ಸದನಕ್ಕೆ ಬಂದು ಕ್ಷಮೆ ಕೇಳಿದರು. ಎಲ್ಲವೂ ತಣ್ಣಗಾಯಿತು. ಬಹುದೊಡ್ಡ ಆಪತ್ತಿನಿಂದ ಸರಕಾರವನ್ನು, ಗುಂಡೂರಾಯರನ್ನು ಪಾರು ಮಾಡಿದ ಅರಸು, ತಮ್ಮನಿಗೆ ತಿಳಿಹೇಳಿದ ಮನಸ್ಥಿತಿಯಲ್ಲಿದ್ದರು. ಇದು ಎಲ್ಲರಿಗೂ ಸಾಧ್ಯವಿಲ್ಲದ್ದು. ಏಕೆಂದರೆ, ತಾವೇ ರಾಜಕಾರಣಕ್ಕೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬ ತಮ್ಮ ಸ್ಥಾನಕ್ಕೆ ಸಂಚಕಾರ ತಂದಿದ್ದರೂ, ಆತನನ್ನು ಸಂಕಷ್ಟದಿಂದ ಬಚಾವು ಮಾಡಿದರಲ್ಲ, ಅದು ಅರಸರ ಮುತ್ಸದ್ದಿತನ.

ಸದನದಲ್ಲಿ ಅರಸರ ಪ್ರಬುದ್ಧತೆದಾಗಿ ಸ್ವಲ್ಪ ದಿನಕ್ಕೆ ಕರ್ನಾಟಕ ಕಂಡರಿಯದ ದೊಡ್ಡ ದುರಂತವೊಂದು ಘಟಿಸಿತು. ಅದೇ ಕಳ್ಳಬಟ್ಟಿ ಸಾರಾಯಿ ದುರಂತ. ಬಡವರು, ಸ್ಲಂ ವಾಸಿಗಳು ಸೊಳ್ಳೆಗಳಂತೆ ಸತ್ತರು. ಈ ದುರಂತ ಕುರಿತು ದೇವರಾಜ ಅರಸು ಶಾಸನ ಸಭೆಯಲ್ಲಿ ಮಾತನಾಡಿದ್ದು, ಇವತ್ತಿಗೂ ಅಧ್ಯಯನಯೋಗ್ಯವಾದದ್ದು. ‘‘ನಾನು ಈ ಲಿಕ್ಕರ್ ಪಾಲಿಸಿ ಮಾಡಿದಾಗ, ಬಹಳ ಜನ ನನ್ನನ್ನು ಲಿಕ್ಕರ್ ಲಾಬಿ ಏಜೆಂಟ್ ಅಂತ ಕರೆದರು. ನಾನು ಯಾರಿಗೂ ಏಜೆಂಟ್ ಆಗಬೇಕಾಗಿರಲಿಲ್ಲ. ನಾನಲ್ಲ, ಮುಖ್ಯಮಂತ್ರಿ ಸ್ಥಾನದಲ್ಲಿ ಯಾರೇ ಇದ್ದರೂ, ಲಿಕ್ಕರ್ ಧಣಿಗಳು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದರು. ನನಗೆ ಸ್ಟೇಟ್ ರೆವಿನ್ಯೂ ಮುಖ್ಯ, ಅವರಿಂದ ಲಾಭ ಪಡೆಯೋದಲ್ಲ. ಈಗ ಈ ಸಾರಾಯಿ ದುರಂತ ಆಗಿದೆಯಲ್ಲ, ಅದರ ಕಿಂಗ್ ಪಿನ್ ಇದಾನಲ್ಲ, ಅವನಿಗೂ ನಿಮ್ಮ ಸರಕಾರದ ಮಂತ್ರಿಯೊಬ್ಬನಿಗೂ ನಿಕಟ ಸಂಪರ್ಕವಿದೆ. (ಈ ಮಂತ್ರಿ ಯಾರಂತ ಅರಸು ಶಾಸನ ಸಭೆಯಲ್ಲಿ ಹೇಳಲಿಲ್ಲ, ಆದರೆ ಅದು ಸಿ.ಎಂ.ಇಬ್ರಾಹಿಂ ಎಂಬುದು ಎಲ್ಲರಿಗೂ ಗೊತ್ತಾಗಿತ್ತು.) ದೇಶಕ್ಕೆ ಕೆಡುಕಾಗುವಂತಹ ದುರಂತಕ್ಕೆ ಕಾರಣರಾದ ಯಾರಾದರೂ ಸರಿ, ಮುಲಾಜಿಲ್ಲದೆ, ಜಾತಿ-ಧರ್ಮ ನೋಡದೆ ಕ್ರಮ ಕೈಗೊಳ್ಳಿ. ಮೊದಲು ಆ ಕಿಂಗ್ ಪಿನ್‌ನನ್ನು ಅರೆಸ್ಟ್ ಮಾಡಿ, ಆತನ ಜೊತೆ ಶಾಮೀಲಾಗಿರುವ ಮಂತ್ರಿಯ ರಾಜೀನಾಮೆ ಪಡೆದರೆ ದೇಶಕ್ಕೆ-ಜನಕ್ಕೆ ಒಳ್ಳೆಯದಾಗುತ್ತದೆ’’ ಎಂದರು.ದರ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಮತ್ತೊಂದು ದುರಂತ.. ಸರ್ಕಸ್‌ಗೆ ಬೆಂಕಿ ಬಿದ್ದದ್ದು. ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆಯಿತು. ಇದರ ಬಗ್ಗೆಯೂ ಅರಸು ಸದನದಲ್ಲಿ ವಿದ್ವತ್ಪೂರ್ಣವಾಗಿ ಮಾತನಾಡಿದರು. ಆ ಸಂದರ್ಭದಲ್ಲಿ ಅರಸು ಮಾಡಿದ ಭಾಷಣವನ್ನು ಯಥಾವತ್ತಾಗಿ ಪ್ರಕಟಿಸಿದರೆ, ಅದು ಹೊಸ ಪೀಳಿಗೆಯ ರಾಜಕಾರಣಿಗಳಿಗೆ ಮಾರ್ಗದರ್ಶನವಾಗುತ್ತದೆ.

ಮಂತ್ರಿ ಇಬ್ರಾಹೀಂ ಕತ್ತಿನಪಟ್ಟಿಗೆ ಕೈ...

ಒಂದು ಸಲ ರಾಜ್ಯದ ಜ್ವಲಂತ ಸಮಸ್ಯೆ ಕುರಿತು ಶಾಸನಸಭೆಯಲ್ಲಿ ಗಹನ ಚರ್ಚೆ ನಡೆಯುತ್ತಿದ್ದಾಗ, ದೇವರಾಜ ಅರಸರನ್ನು ಅವಮಾನಿಸಲೆಂದೇ ಅವರ ಚಾರಿತ್ರಹರಣ ಮಾಡುವಂತಹ ‘‘ಗುಡಸೆಟ್ಟಿ ಹೆಂಗಸನ್ನ ಕೇಳಿದ್ರೆ ನಿಮ್ಮ ಕ್ಯಾರೆಕ್ಟರ್ ಏನು ಅಂತ ಹೇಳ್ತಾಳೆ’’ ಎಂದು ಮಂತ್ರಿ ಸಿ.ಎಂ.ಇಬ್ರಾಹೀಂ ಆಡಿಬಿಟ್ಟರು. ನೀವು ನಂಬಲ್ಲ, ಆ ಮಾತು ಅರಸರಿಗೆ ಮರ್ಮಾಘಾತವನ್ನುಂಟು ಮಾಡಿತ್ತು. ಅದನ್ನು ಕೇಳುತ್ತಿದ್ದಂತೆ ಅರಸು ಕುಸಿದು ಕೂತರು. ಅವರು ಹಾಗೆ ಕುಸಿದದ್ದನ್ನು ಕಂಡ ಇಡೀ ಸದನ- ಆಡಳಿತ ಪಕ್ಷ, ವಿರೋಧ ಪಕ್ಷ- ಎದ್ದು ನಿಂತು ಇಬ್ರಾಹೀಂಗೆ ಧಿಕ್ಕಾರ ಕೂಗಿತು. ಬಾವಿಗಿಳಿದು ದಾಂಧಲೆ ಎಬ್ಬಿಸಿತು. ರೂಲಿಂಗ್ ಪಾರ್ಟಿಯವರೇ ಮಂತ್ರಿ ಇಬ್ರಾಹೀಂನ ಕತ್ತಿನಪಟ್ಟಿಗೆ ಕೈಹಾಕಿ ಎಳೆದಾಡಿದರು, ಬಾಯಿಗೆ ಬಂದಂತೆ ಉಗಿದು ಛೀಮಾರಿ ಹಾಕಿದರು. ಸಿ.ಎಂ.ಇಬ್ರಾಹೀಂರ ಕೀಳುಮಟ್ಟದ ಮಾತಿಗೆ ಅರಸು ಮಾನಸಿಕ ಆಘಾತಕ್ಕೊಳಗಾಗಿದ್ದರು. ಆ ಘಟನೆಯ ನಂತರ ಅಸೆಂಬ್ಲಿಗೆ ಹೋಗುವುದನ್ನು ನಿಲ್ಲಿಸಿದರು. ನಾನು ಗುಂಡೂರಾವ್‌ರ ಬಳಿ ಹೋಗಿ, ‘‘ಅರಸರಿಗೆ ಫೋನ್ ಮಾಡಿ ಕ್ಷಮೆ ಕೇಳಿ’’ ಎಂದೆ. ಗುಂಡೂರಾವ್‌ಗೂ ಆ ಘಟನೆ ಘಾಸಿಗೊಳಿಸಿತ್ತು, ಆಗಲಿ ಎಂದರು. ನಾನೇ ಫೋನ್ ಮಾಡಿ ಗುಂಡೂರಾಯರ ಕೈಗೆ ಕೊಟ್ಟೆ. ಆಗಲೂ ಅರಸು ಸಹನೆ, ತಾಳ್ಮೆಯಿಂದ, ‘‘ನೋಡಪ್ಪ, ನಿನ್ನ ಕ್ಯಾಬಿನೆಟ್‌ನಲ್ಲಿ ಎಂಥವರಿದ್ದಾರೆ ಅನ್ನೋದು ಮುಖ್ಯ. ಅದನ್ನು ನೋಡಿ ಜನ ಜಡ್ಜ್ ಮಾಡ್ತಾರೆ, ಯಾರನ್ನ ಇಟ್ಕೋಬೇಕು, ಬಿಡಬೇಕು ಅನ್ನೋದನ್ನು ನಿನ್ನ ವಿವೇಚನೆಗೆ ಬಿಡ್ತೀನಿ’’ ಎಂದು ಬುದ್ಧಿ ಹೇಳಿದರು. ಗುಂಡೂರಾವ್ ಕ್ಷಮೆ ಕೇಳಿ ಫೋನಿಟ್ಟರೆ ಹೊರತು ಇಬ್ರಾಹೀಂ ಮೇಲೆ ಕ್ರಮ ಕೈಗೊಳ್ಳಲಿಲ್ಲ. ರೈತರಿಗಾಗಿ ಅರಸು ಪಾದಯಾತ್ರೆ

ಮುಖ್ಯಮಂತ್ರಿ ಗುಂಡೂರಾವ್ ಮಾಡಿದ ಮತ್ತೊಂದು ಅವಘಡ, ನರಗುಂದ-ನವಲಗುಂದದಲ್ಲಿ ರೈತರ ಮೇಲೆ ಗೋಲಿಬಾರ್. ರೈತರನ್ನು ಕೀಳಾಗಿ ಕಾಣುವುದು ಅಕ್ಷಮ್ಯ ಅಪರಾಧವೆಂದು ಭಾವಿಸಿದ್ದ ದೇವರಾಜ ಅರಸು, ಆ ಸಂದರ್ಭದಲ್ಲಿ ಸದನದಲ್ಲಿ ಮಾಡಿದ ಭಾಷಣ ಅತ್ಯಮೋಘವಾಗಿತ್ತು. ದಾಖಲೆಗೆ ಅರ್ಹವಾಗಿತ್ತು. ‘‘ರೈತರ ರಕ್ತ ಕುಡಿದ ಸರಕಾರ ನಿಮ್ಮದು’’ ಎಂದ ಅಬ್ಬರಿಸಿದರು. ಮುಂದುವರಿದು, ‘‘ಮಂಡ್ಯದ ವರುಣಾ ಯೋಜನೆ ವಿರೋಧಿಸಿ ಚೆಡ್ಡಿ ಚಳವಳಿ ಮಾಡಿದ ಒಂದೂವರೆ ಲಕ್ಷ ರೈತರು, ಘಟಪ್ರಭಾ-ಮಲಪ್ರಭಾ ರೈತ ಹೋರಾಟ ಮತ್ತು ಕಾಳಿ ಪ್ರಾಜೆಕ್ಟ್‌ಗಾಗಿ ಭೂಮಿ ಬಿಡದೆ ಹೋರಾಡಿದ ರೈತರು... ಹೀಗೆ ಈ ಎಲ್ಲ ಸಂದರ್ಭಗಳಲ್ಲೂ ನಮ್ಮ ಸರಕಾರ ರೈತರ ಮೇಲೆ ಗುಂಡು ಹಾರಿಸಲಿಲ್ಲ. ಸಮಸ್ಯೆಯನ್ನು ಸೂಕ್ಷ್ಮವಾಗಿ ನಿರ್ವಹಿಸಿ ರೈತರ ಪರ ನಿಂತಿತ್ತು. ಆದರೆ ನಿಮ್ಮ ಸರಕಾರ ರೈತರ ಮೇಲೆ ಗೋಲಿಬಾರ್ ಮಾಡಿ ಹೆಣ ಉರುಳಿಸಿದೆ. ನಾನು ರೈತ, ಉಳುಮೆ ಮಾಡಿದೋನು. ರೈತರ ನೋವು ಏನು ಅನ್ನುವುದು ನನಗೆ ಗೊತ್ತಿದೆ. ಜನರಿಗೆ ಅನ್ನ ಕೊಡುವ ರೈತನನ್ನು ಕೊಲ್ಲುವ ಸರಕಾರ ಉಳಿಯಲ್ಲ. ನೀವು ರಾಜೀನಾಮೆ ಕೊಡಿ ಅಂತ ನಾನು ಕೇಳಲ್ಲ, ಆದರೆ ನೀವು ರೈತರನ್ನು ಕಡೆಗಣಿಸಿದ್ದೀರಾ, ಅದಕ್ಕೆ ತಕ್ಕ ಬೆಲೆಯನ್ನು ತೆರಲಿದ್ದೀರಾ, ನಾನು ರೈತರನ್ನು ಸಂಘಟಿಸಲು ಹೋಗ್ತಿದೀನಿ’’ ಎಂದು ಹೇಳಿ ನರಗುಂದ-ನವಲಗುಂದದಿಂದ ಪಾದಯಾತ್ರೆ ಆರಂಭಿಸಲು ಹೊರಟೇಬಿಟ್ಟರು. ರೈತರ ಪರ ಪಾದಯಾತ್ರೆ ಆರಂಭಿಸಿದಾಗ ಅರಸು ಮುಖ್ಯಮಂತ್ರಿ ಯಲ್ಲ, ಅಧಿಕಾರವಿರಲಿಲ್ಲ. ಅಂತಹ ಸಂದರ್ಭದಲ್ಲಿ ಅರಸು ನರಗುಂದಕ್ಕೆ ಹೋಗಿ ರೈತರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಆ ಸುದ್ದಿ ಮುಖ್ಯಮಂತ್ರಿ ಗುಂಡೂರಾಯರಿಗೆ ತಲುಪಿ, ಪತ್ರಕರ್ತರ ಮುಂದೆ, ‘‘ಅರಸು ಸಭೆಗೆ 50 ಜನ ಬಂದಿದ್ದರಂತೆ’’ ಎಂದು ಗೇಲಿ ಮಾಡಿಕೊಂಡು ನಗಾಡು ತ್ತಾರೆ, ಅದು ಸುದ್ದಿಯಾಗುತ್ತದೆ. ಅದನ್ನು ನೋಡಿದ ಅರಸು ಸಿಟ್ಟಾಗುವುದಿಲ್ಲ, ‘‘ಅವರಿಗೆ ತಲಕಾವೇರಿ, ಗಂಗೋತ್ರಿ ಗೊತ್ತಿಲ್ಲ ವೆಂದು ಕಾಣುತ್ತದೆ. ಅಲ್ಲಿ ತಂಬಿಗೆ ನೀರು ಮಾತ್ರ ಸಿಗೋದು. ಆದರೆ ಅದೇ ನೀರು ಕಿರುಗಾಲುವೆ, ತೊರೆ, ಹೊಳೆಯಾಗಿ ಹರಿದು, ತಂಜಾವೂರಿನಲ್ಲಿ ಸಾಗರವಾಗುತ್ತದೆ. ಅದೇ ರೀತಿ ನಮ್ಮ ರೈತ ಹೋರಾಟವೂ ಇವತ್ತು 50 ಜನರಿರಬಹುದು, ಮುಂದೆ ಸಾಗರವಾಗುತ್ತದೆ. ಸರಕಾರವನ್ನು ಅಲ್ಲಾಡಿಸುತ್ತದೆ’’ ಎಂದು ಎದಿರೇಟು ಕೊಟ್ಟರು.ರಸು ಹೇಳಿದಂತೆಯೇ ಆಯಿತು. ನರಗುಂದದಲ್ಲಿ 50 ಜನರಿಂದ ಶುರುವಾದ ರೈತ ಜಾಥ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಯಿತು. ರೈತ ಹೋರಾಟಕ್ಕೆ ಕಾರ್ಮಿಕರು ಕೈ ಜೋಡಿಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಹೋರಾಟಗಾರರಿಗೆ ಉದ್ದಕ್ಕೂ ಜನರೇ ಮುಂದೆ ಬಂದು ನೀರು, ಮಜ್ಜಿಗೆ, ರೊಟ್ಟಿ, ಊಟ ಕೊಟ್ಟರು. ಹುಬ್ಬಳಿ-ಧಾರವಾಡ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು, ನೆಲಮಂಗಲ, ಯಶವಂತಪುರ... ಕೊನೆಗೆ ಕಬ್ಬನ್ ಪಾರ್ಕ್‌ಗೆ ಬರುವಷ್ಟರಲ್ಲಿ 4 ಲಕ್ಷ ಜನರ ಬೃಹತ್ ಜಾಥವಾಗಿತ್ತು. ಅರಸರ ಹೋರಾಟಕ್ಕೆ ಬೆಂಬಲವಾಗಿ ಎಸ್.ಆರ್. ಬೊಮ್ಮಾಯಿ, ಜೆ.ಎಚ್.ಪಟೇಲ್ ನಿಂತರು. ಆಶ್ಚರ್ಯವೆಂದರೆ, ಮಣ್ಣಿನ ಮಗ ಎಚ್.ಡಿ.ದೇವೇಗೌಡರು ಕಾಣಲೇ ಇಲ್ಲ. ಆಗಿನ ಕೃಷಿ ಮತ್ತು ಕಂದಾಯ ಮಂತ್ರಿ ಎಸ್.ಬಂಗಾರಪ್ಪ, ಪ್ರಕರಣವನ್ನು ನ್ಯಾಯಾಂಗ ತನಿಖೆಗೊಪ್ಪಿಸಿ ರಾಜೀನಾಮೆ ಸಲ್ಲಿಸಿದರು. ಆಗ ಅರಸು, ‘‘ಈಗಲಾದರೂ ಮುಖ್ಯಮಂತ್ರಿ ಗುಂಡೂರಾವ್ ಕಣ್ತೆರೆಯಲಿ’’ ಎಂದದ್ದು ಅರ್ಥಪೂರ್ಣವಾಗಿತ್ತು. ದು ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಜಾಥ. ಗುಂಡೂರಾವ್‌ರ ಆಡಳಿತದಲ್ಲಿ ಕಾಂಗ್ರೆಸ್ ಜನವಿರೋಧಿ ಸರಕಾರವೆಂದು ಹಣೆಪಟ್ಟಿ ಪಡೆಯಿತು. ಇದಕ್ಕೆ ಪ್ರತಿಯಾಗಿ ಅರಸರಿಗೆ ಸಿಕ್ಕ ಗೌರವವೇನು ಗೊತ್ತೆ? ಅರಸರ ಹಿಂದಿದ್ದ ಅಳಿದುಳಿದ ಶಾಸಕರೂ ಹೋಗಿ ಕಾಂಗ್ರೆಸ್ ಸೇರಿದರು. ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಹೋಯಿತು. ಮುಖ್ಯಮಂತ್ರಿಯಾಗಿದ್ದವರು ಕೆಲವೇ ದಿನಗಳ ಅಂತರದಲ್ಲಿ ವಿರೋಧ ಪಕ್ಷದ ನಾಯಕರಾಗಿ, ಕೊನೆಗೆ ಸಾಮಾನ್ಯ ಶಾಸಕರಾಗಿ, ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಕೂರುವಂತಾಯಿತು. ಆದರೆ ಎಲ್ಲವನ್ನು ಕಂಡಿದ್ದ ಅರಸು, ಯಾವುದಕ್ಕೂ ಬೇಸರಿಸದೆ, ಬಂದದ್ದನ್ನೆಲ್ಲ ತಣ್ಣಗೆ ಸ್ವೀಕರಿಸಿದರು. ಸಾವು-ನೋವುಗಳ ಕಷ್ಟಕಾಲ
ದೇವರಾಜ ಅರಸು ಸಾರ್ವಜನಿಕ ಜೀವನದಲ್ಲಾದ ಏರಿಳಿತಗಳಿಂದ ನೋವು, ಅವಮಾನ, ಹಿಂಸೆಗಳನ್ನು ಅನುಭವಿಸುವಂತಾದರೆ; ವೈಯಕ್ತಿಕ ಬದುಕಿನಲ್ಲಿ ಇದಕ್ಕಿಂತ ಹೆಚ್ಚಿನ ಸಂಕಟ, ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅದೇನೋ ಹೇಳ್ತಾರಲ್ಲ, ಮನುಷ್ಯ ಹಳ್ಳಕ್ಕೆ ಬಿದ್ದಾಗಲೇ ಆಳಿಗೊಂದು ಕಲ್ಲು ಅನ್ನುವ ಹಾಗೆ, ಅರಸರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುತ್ತಿದ್ದಂತೆ ಸಮಸ್ಯೆಗಳು ಒಂದಾದಮೇಲೆ ಒಂದರಂತೆ ಬಂದು ಅಮರಿಕೊಳ್ಳತೊಡಗಿದವು.ರಸರಿಗೆ ಎರಡನೇ ಮಗಳು ನಾಗರತ್ನ ಕಂಡರೆ ಬಹಳ ಪ್ರೀತಿ. ತುಂಬ ಮುದ್ದಿನಿಂದ ಸಾಕಿದ್ದರು. ಆಕೆಗೂ ಅಪ್ಪನನ್ನು ಕಂಡರೆ ಅಷ್ಟೇ ಪ್ರೀತಿ, ಗೌರವ. ನಾಗರತ್ನ ನೆಲಮಂಗಲದ ಬಳಿ ತೋಟ ಮಾಡಿದ್ದರು. ಅಲ್ಲಿಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಹೀಗೆಯೇ ಒಂದು ದಿನ ತೋಟಕ್ಕೆ ಹೋಗಿದ್ದಾಗ, ಅಲ್ಲಿಂದ ‘‘ನಾಗರತ್ನ ಬಾವಿಗೆ ಬಿದ್ದು ತೀರಿಕೊಂಡಿದ್ದಾರೆ’’ ಎಂದು ಸುದ್ದಿ ಬಂದಿತು. ಇದನ್ನು ಅರಸು ಕೇಳಲಿಕ್ಕೇ ತಯಾರಿರಲಿಲ್ಲ. ಇನ್ನು ಆಕೆಯ ಮುಖ ನೋಡುವುದುಂಟೆ. ಭಾರವಾದ ಹೃದಯದಿಂದ ಆಕೆಯ ವಿಧಿ ವಿಧಾನ ಕಾರ್ಯಗಳನ್ನೆಲ್ಲ ನೋವು ನುಂಗಿಯೇ ನೆರವೇರಿಸಿದರು. ತನ್ಮಧ್ಯೆ ನಾಗರತ್ನರದು ಸಹಜ ಸಾವಲ್ಲ ಆತ್ಮಹತ್ಯೆ ಎಂದು ಸುದ್ದಿ ಹಬ್ಬಿಸಲಾಯಿತು. ಅರಸು ಜೊತೆಗಿದ್ದವರೇ ಕತೆ ಕಟ್ಟಿ ಮಾತಾಡಿ ಕೊಳ್ಳತೊಡಗಿದರು. ಮಾಧ್ಯಮಗಳಲ್ಲೂ ಬಿತ್ತರವಾಯಿತು. ಕೊನೆಗೆ ನಾಗರತ್ನ ಸತ್ತಿದ್ದು ಕಾಲು ಜಾರಿ ಬಾವಿಗೆ ಬಿದ್ದದ್ದರಿಂದ ಎಂದು ಗೊತ್ತಾಯಿತು. ತೋಟದ ಆಳುಗಳೂ ಅದನ್ನೇ ಹೇಳಿದರು. ಈ ಶಾಕ್‌ನಿಂದ ಹೊರಬರು ವಷ್ಟರಲ್ಲಿಯೇ ಅರಸರಿಗೆ ಮತ್ತೊಂದು ಆಘಾತ- ಸಹೋದರ ಕೆಂಪರಾಜ್ ಅರಸು ತೀರಿಕೊಂಡದ್ದು. ಅರಸರಿಗೆ ಕರುಳುಬಳ್ಳಿಯ ಸಂಬಂಧ ಅಂತ ಇದ್ದವರು ಕೆಂಪರಾಜ್ ಅರಸು ಒಬ್ಬರೆ. ಕೆಂಪರಾಜ್‌ರನ್ನು ಕಂಡರೆ ಅರಸರಿಗೆ ಅತೀವ ಅಕ್ಕರೆ. ಸತ್ತ ಸುದ್ದಿ ಕೇಳಿ ಸಂಕಟದಿಂದ ಸೊರಗಿಹೋದರು.


"
 ಅಧ್ಯಾತ್ಮದತ್ತ ಅರಸುಷ್ಟಾದರೂ ಅರಸು ರಾಜಕಾರಣ ಬಿಡಲಿಲ್ಲ. ದಿಲ್ಲಿ ಪ್ರವಾಸ, ನಾಯಕರ ಭೇಟಿ, ರೈತ ರ್ಯಾಲಿ ಅಂತೇಳಿ ಸುತ್ತುತ್ತಲೇ ಇದ್ದರು. ಈ ನಡುವೆ ಗುಂಡೂರಾವ್‌ರ ಕೆಟ್ಟ ಆಡಳಿತದಿಂದ ಬೇಸತ್ತ ನಾನು ಮತ್ತು ರಮೇಶ್‌ಕುಮಾರ್, ಅರಸರನ್ನು ಬಿಟ್ಟುಬಂದ ತಪ್ಪಿನ ಅರಿವಾಗಿ ಅವರಿಂದ ಆಗಲೇ ದೂರವಾಗಿದ್ದೆವು. ಅದ್ಯಾವುದೋ ಕಮಿಟಿ ಮೀಟಿಂಗ್ ಕಾರಣಕ್ಕೆ ಇಬ್ಬರೂ ದಿಲ್ಲಿಗೆ ಹೋಗಿದ್ದೆವು. ಅದೇ ಸಮಯಕ್ಕೆ ದೇವರಾಜ ಅರಸು ಕೂಡ ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಮಾಜಿ ಪ್ರಧಾನಿ ಚರಣ್ ಸಿಂಗ್ ನೇತೃತ್ವದ ರೈತ ಸಭೆಯೊಂದರಲ್ಲಿ ಭಾಗವಹಿಸಲು ಕರ್ನಾಟಕ ಭವನದಲ್ಲಿ ತಂಗಿದ್ದರು. ನನಗೆ ಅವರನ್ನು ನೋಡಬೇಕೆನಿಸಿ ಫೋನ್ ಮಾಡಿದೆ. ಅದಕ್ಕವರು ‘‘ಬನ್ನಿಯಪ್ಪ, ಅದಕ್ಕೇನಂತೆ, ರೂಂ. ನಂಬರ್ 3ರಲ್ಲಿದ್ದೇನೆ’’ ಎಂದರು. ರಸರಿಗೆ ಅದೇನನ್ನಿಸಿತೋ, ಹುಟ್ಟಿಬೆಳೆದದ್ದು, ಬದುಕಿದ್ದು ಎಲ್ಲವನ್ನು ಹೃದಯ ಬಿಚ್ಚಿ ಮಾತನಾಡಿದರು. ಬೆಳಗ್ಗೆ ಮಾತಿಗೆ ಕೂತವರು ಮಧ್ಯಾಹ್ನ 2 ಗಂಟೆವರೆಗೂ ಮಾತನಾಡುತ್ತಲೇ ಇದ್ದರು. ಮಾತಿನ ನಡುವೆ ದೇವರು, ಅಧ್ಯಾತ್ಮ, ವಿಜ್ಞಾನ, ರಾಜಕಾರಣ, ಸಮಾಜ, ಸಂಬಂಧ ಎಲ್ಲವೂ ಬಂದುಹೋಯಿತು. ನನ್ನ ಅಷ್ಟು ದಿನಗಳ ಅನುಭವದಲ್ಲಿ ಅರಸು ಹಾಗೇ ಮಾತನಾಡಿದ್ದನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ಅವರು ಮಾತನಾಡಿದ್ದನ್ನೆಲ್ಲ ಪೂರ್ಣವಾಗಿ ಇಲ್ಲಿ ಈಗ ಹೇಳಲು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೋ ಗೊತ್ತಿಲ್ಲ.ೋಡಪ್ಪ ಮೊದಲು ನಾನು ನಾಸ್ತಿಕನಾಗಿದ್ದೆ, ದೇವಸ್ಥಾನಕ್ಕೆ ಹೋದವನೇ ಅಲ್ಲ, ಸೆಂಟ್ರಲ್ ಕಾಲೇಜಿನಲ್ಲಿ ಫಿಸಿಕ್ಸ್ ಓದುವಾಗ, ಆಟಂ.. ಆಟಂ ಎಷ್ಟಿರುತ್ತದೆ, ಗುಂಡುಸೂಜಿಯಷ್ಟು ಚಿಕ್ಕದಾಗಿರುತ್ತದೆ. ಅಂಥದ್ದಕ್ಕೆ ಈ ಪ್ರಪಂಚವನ್ನೇ ಸರ್ವನಾಶ ಮಾಡುವ ಶಕ್ತಿ ಇರುತ್ತದೆ ಅಂದರೆ, ಇಂಥದ್ದನ್ನು ಸೃಷ್ಟಿ ಮಾಡಿದೋರಿಗೆ ಇದಕ್ಕಿಂತ ಯಾವುದೋ ದೊಡ್ಡ ಶಕ್ತಿ ಇರಬೇಕು. ಇದನ್ನು ಯೋಚನೆ ಮಾಡ್ತಾ ಮಾಡ್ತಾ ಸೈನ್ಸ್‌ನಿಂದ ಅಧ್ಯಾತ್ಮದ ಕಡೆಗೆ ಬಂದೆ. ಆವಾಗಿನಿಂದ ದೇವರನ್ನು ನಂಬಲಿಕ್ಕೆ ಶುರು ಮಾಡಿದೆ. ಹುಣಸೂರಿನಲ್ಲಿದ್ದಾಗ ತುಂಬಾ ಕಷ್ಟದಲ್ಲಿದ್ದೆ. ನನಗೆ ಪರಿಚಿತ ಸಾಬರ ಮನೇನಲ್ಲಿ ಊಟ ಮಾಡ್ತಿದ್ದೆ. ಯಾರದೋ ಜಗಲಿ ಮೇಲೆ ಮಲಗುತ್ತಿದ್ದೆ. ಅವರು ಕೊಡುತ್ತಿದ್ದ ಕಾಫಿ ಕುಡಿದು, ಬೀಡಿ ಸೇದಿ, ನ್ಯಾಯ-ಪಂಚಾಯ್ತಿ ಮಾಡ್ತಿದ್ದೆ. ಜೀವನದಲ್ಲಿ ಲೆಕ್ಕವಿಲ್ಲದಷ್ಟು ಏರುಪೇರು ಕಂಡೆ. ನನಗೆ ಮೂರು ಜನ ಮಕ್ಕಳು ಹುಟ್ಟಿ ಸತ್ತೋದ್ರು. ಆಮೇಲೆ ಈ ದೊಡ್ಡ ಮಗಳು ಹುಟ್ಟಿದ್ದು. ಒಂದು ಸಲ ನನ್ನ ಹೆಂಡತಿ ತುಂಬು ಗರ್ಭಿಣಿ, ಆಗ ನಾನು ಎಂಎಲ್‌ಎ ಆಗಿದ್ದೆ. ನಾನು ಬೆಂಗಳೂರಿನಿಂದ ಊರಿಗೆ ಹೋಗುವಷ್ಟರಲ್ಲಿ ಹೆರಿಗೆ ನೋವು ಶುರುವಾಗಿ ಸೀರಿಯಸ್ಸಾಗಿತ್ತು. ಎತ್ತಿನ ಗಾಡಿಯಲ್ಲಿ ಹಳ್ಳಿಯಿಂದ ಹುಣಸೂರಿಗೆ ಕರೆದುಕೊಂಡು ಹೋದೆ. ಅಲ್ಲಿ ಡಾಕ್ಟರು, ಇಲ್ಲಿ ಆಗಲ್ಲ, ಮೈಸೂರಿಗೆ ಕರೆದುಕೊಂಡು ಹೋಗಿ ಅಂದರು. ಹೋಗುವಷ್ಟರಲ್ಲಿ ಮಗು ಸತ್ತುಹೋಯಿತು. ಇದನ್ನೆಲ್ಲ ಹೇಳುತ್ತಾ ಕಣ್ಣಲ್ಲಿ ನೀರು ಹಾಕಿಕೊಂಡರು. ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು ನಾನೇನು ಕನಸು ಕಂಡಿರಲಿಲ್ಲ. ದೇವರು ಕರುಣೆ ತೋರಿಸಿದ, ಬಡವರ ಸೇವೆ ಮಾಡಲು ಅವಕಾಶ ದೊರೆಯಿತು. ಹಸಿವು, ಅವಮಾನಗಳನ್ನು ಕಂಡಿದ್ದರಿಂದ ಅಂತಹ ಜನರಿಗೆ ಏನಾದರೂ ಮಾಡಬೇಕೆನಿಸಿತು. ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ರೈತರ ಸಾಲ ಮನ್ನಾ, ಜೀತ ವಿಮುಕ್ತಿ, ಭಾಗ್ಯಜ್ಯೋತಿ, ಮೀಸಲಾತಿ ಮಾಡಿದೆ. ಆವಾಗಿನಿಂದ ನನಗೆ ದೇವರ ಮೇಲೆ ನಂಬಿಕೆ ಬಂತು. ಪೂಜೆ, ದೇವಸ್ಥಾನಗಳಿಗೆ ಹೋಗೋದು ಶುರುವಾಯಿತು’’ ಎಂದರು.

ನಾನು, ಸರ್, ಮುಂದಕ್ಕೆ ರಾಜಕಾರಣ ಏನು ಅಂದೆ. ಅದಕ್ಕವರು, ‘‘ನೋಡಪ್ಪ ಗುಂಡೂರಾವ್-ಇಂದಿರಾಗಾಂಧಿಯವರು ಬೀದಿಗೆ ಬಂದು ಕ್ಯಾನ್ವಾಸ್ ಮಾಡಿದರೂ ಗೆಲ್ಲುವುದು ಕಷ್ಟವಿದೆ’’ ಎಂದರು. ಮುಂದುವರಿದ ನಾನು, ನೀವು ಒಪ್ಪುವುದಾದರೆ, ಬಂಗಾರಪ್ಪನವರನ್ನು ನಾನು ಕರೆತರುತ್ತೇನೆ, ಅವರೂ ಸಿದ್ಧರಿದ್ದಾರೆ, ನಾವೆಲ್ಲ ಸೇರಿ ಪಾರ್ಟಿ ಕಟ್ಟೋಣ ಎಂದೆ. ಆಗಲಿ ಎಂದವರು ಬೆಂಗಳೂರಿಗೆ ಬಂದು ಒಂದು ಮೀಟಿಂಗ್ ಕರೆದೇಬಿಟ್ಟರು. ಅರಸು ಮನೆಯ ಆ ಸಭೆಯಲ್ಲಿ ಜಾರ್ಜ್ ಫೆರ್ನಾಂಡಿಸ್, ಜೆ.ಎಚ್.ಪಟೇಲ್, ಖಾದ್ರಿ ಶಾಮಣ್ಣ, ಪೆರುಮಾಳ್, ಎಂ.ಸ�

share
ನಿರೂಪಣೆ:ಬಸು ಮೇಗಲ್ಕೇರಿ
ನಿರೂಪಣೆ:ಬಸು ಮೇಗಲ್ಕೇರಿ
Next Story
X