‘ಸ್ವಸಹಾಯ ಸಂಘದಲ್ಲಿ ಎಸ್‌ಎಂಎಸ್ ತಂತ್ರಜ್ಞಾನ ಅನುಷ್ಠಾನ’
ಉಡುಪಿ, ಮೇ 31: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ 2016-17ನೆ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 100 ಸ್ವ ಸಹಾಯ ಸಂಘಗಳ ರಚನೆಯ ಗುರಿಯನ್ನು ಹೊಂದಿದ್ದು, ಸಂಘದಲ್ಲಿ ಪಾರ ದರ್ಶಕತೆಯನ್ನು ಕಾಯ್ದುಕೊಳ್ಳಲು ಶೇ.100ಕ್ಕೆ 100ರಷ್ಟು ಎಸ್‌ಎಂಎಸ್ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 13,163 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 1,39,807 ಸದಸ್ಯರನ್ನು ಹೊಂದಿದೆ. 2015-16ನೆ ಸಾಲಿನಲ್ಲಿ ಒಟ್ಟು 10145ಲಕ್ಷ ರೂ. ಉಳಿತಾಯ ಮಾಡಲಾಗಿದೆ. 336ಕೋಟಿ ರೂ. ಕಿರು ಸಾಲವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 33 ವಲಯಗಳಿದ್ದು, 24 ವಲಯಗಳಲ್ಲಿ ಶೇ.100 ಸಾಲ ಮರುಪಾವತಿಯಾಗಿದೆ ಎಂದರು.
ಜನ್‌ಧನ್ ಯೋಜನೆಯಡಿ ಜಿಲ್ಲೆಯಲ್ಲಿ 14,230 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಎಲ್‌ಐಸಿ ಜೀವನ್ ಮಧುರ ಪಾಲಿಸಿಯನ್ನು ಒಟ್ಟು 1,13, 938 ಕುಟುಂಬಗಳಿಗೆ ಮಾಡಿಸಲಾಗಿದೆ. 87899 ಕುಟುಂಬಗಳ 364233 ಸದಸ್ಯರಿಗೆ ಆರೋಗ್ಯ ವಿಮೆ ಮಾಡಲಾಗಿದೆ. 150 ಮದ್ಯವರ್ಜನ ಶಿಬಿರ ಗಳಲ್ಲಿ 9049 ಮಂದಿ ಪಾನ ಮುಕ್ತರಾಗಿದ್ದಾರೆ ಎಂದು ಅವರು ಹೇಳಿದರು.
ಮಾಸಾಶನ ಯೋಜನೆಯಲ್ಲಿ ಜಿಲ್ಲೆಯ ಒಟ್ಟು 271 ಕುಟುಂಬಗಳಿಗೆ ವಾರ್ಷಿಕ 13.53ಲಕ್ಷ ರೂ. ಪಾವತಿ ಮಾಡಲಾಗಿದೆ. 636 ವಿದ್ಯಾರ್ಥಿಗಳಿಗೆ 3607ಲಕ್ಷ ರೂ. ಸುಜ್ಞಾನನಿಧಿ ಶಿಷ್ಯ ವೇತನವನ್ನು ನೀಡಲಾಗುತ್ತಿದೆ. ಸಮು ದಾಯ ಅಭಿವೃದ್ಧಿ ಕಾರ್ಯಕ್ರಮದಡಿ 503.57ಲಕ್ಷ ರೂ. ಅನುದಾನ ನೀಡ ಲಾಗಿದೆ. ಹಡಿಲು ಭೂಮಿ ಅಭಿವೃದ್ದಿ ಯೋಜನೆಯಡಿ 553 ಕುಟುಂಬ ಗಳ 830 ಎಕರೆಯಲ್ಲಿ 5.53ಲಕ್ಷ ರೂ. ಮೊತ್ತದ ಕೃಷಿ ಚಟುವಟಿಕೆ ಮಾಡ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 750 ಮನೆಗಳಿಗೆ ಸೋಲಾರ್ ಅಳವಡಿಕೆ, 285 ಮನೆಗಳಲ್ಲಿ ಗೋಬರ್ ಗ್ಯಾಸ್ ಅನುಷ್ಠಾನ, 1485 ಕುಟುಂಬದ 2100 ಎಕರೆಯಲ್ಲಿ ಶ್ರೀಪದ್ಧತಿ ಭತ್ತದ ಬೇಸಾಯವನ್ನು ಮಾಡಲಾಗುವುದು. 420ಕೋಟಿ ರೂ. ಸಾಲವನ್ನು ಅಭಿವೃದ್ದಿಗಾಗಿ ನೀಡಲಾಗು ವುದು. 600 ಕುಟುಂಬಗಳಿಗೆ ಸುಜ್ಞಾನ ನಿಧಿ ಶಿಷ್ಯ ನೇತನ ನೀಡುವುದು ನಮ್ಮ ಮುಂದಿನ ಯೋಜನೆಯಾ ಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್ ಉಪಸ್ಥಿತರಿದ್ದರು.







