ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಅಭ್ಯರ್ಥಿ ಹೆಚ್.ಎನ್. ಮಂಚೇಗೌಡ ಮನವಿ
ಹಾಸನ, ಜೂ.1: ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಅಭ್ಯರ್ಥಿ ಹೆಚ್.ಎನ್. ಮಂಚೇಗೌಡ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಇದು ಪದವಿದರರ ಚುನಾವಣೆಯಾಗಿದ್ದು, ಬಹುತೇಕ 98 ಭಾಗ ಹೆಂಡ, ತುಂಡು ಇತರೆ ಆಮಿಷಗಳಿಗೆ ಮತವನ್ನು ಮಾರಿಕೊಳ್ಳುವುದಿಲ್ಲ ಎಂಬುದು ನನ್ನ ದೃಢವಾದ ನಂಬಿಕೆ ಎಂದರು. ಆತ್ಮ ಸಾಕ್ಷಿಯಾಗಿ ವರ್ತಿಸಿ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಅದರಂತೆ ನಾನು ಪಕ್ಷದಿಂದ ಟಿಕೆಟ್ ವಂಚಿತರಾಗಿ ಈಗ ಪಕ್ಷೇತರ ಕಾಂಗ್ರೆಸ್ ಪಕ್ಷದ ಸ್ವಾಭಿಮಾನ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲಾಗಿದೆ ಎಂದರು. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿ ಹೊರಟಿದೆ. ಆದರೇ ಕಾಂಗ್ರೆಸ್‌ನಿಂದಲೇ ಅಂತಹ ವಾತವರಣ ನಿರ್ಮಾಣವಾಗಿದೆ ಎಂದು ದೂರಿದರು. ಮೂರು ಜಿಲ್ಲೆಯಿಂದ ನನಗೆ ಅತ್ಯಾಧಿಕ ಮತ ನೀಡಿ ಜಯಶೀಲರನ್ನಾಗಿ ಮಾಡಲಿದ್ದಾರೆ ಎಂದು ಭರವಸೆ ನುಡಿದರು.
ಜೂನ್ 9 ರಂದು ನಡೆಯಲಿರುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ಞಾವಂತ ಪದವಿದರರು ನನಗೆ ಮೊದಲ ಆಧ್ಯತೆ ನೀಡಿ ಜಯಶೀಲರನ್ನಾಗಿ ಮಾಡುವಂತೆ ಇದೆ ವೇಳೆ ಮನವಿ ಮಾಡಿದರು.





