ಕನ್ಯತ್ವ ಪರೀಕ್ಷೆಯಲ್ಲಿ ಪತ್ನಿ ಫೇಲು: ಮದುವೆಯಾಗಿ 48ಗಂಟೆಯಲ್ಲೇ ಪತಿಯಿಂದ ವಿಚ್ಛೇದನ

ಹೊಸದಿಲ್ಲಿ, ಜೂನ್ 1: ಪತಿ ಪತ್ನಿ ಸಂಬಂಧ ವಿಶ್ವಾಸಾಧಾರಿತವಾದುದು ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಸಂಬಂಧ ಕನ್ಯತ್ವ ಪರೀಕ್ಷೆ ಆಧಾರಿತವಾಗಿದೆ ಎಂದರೆ ತಪ್ಪಾಗದು. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮದುವೆಯಾದ 48 ಗಂಟೆಗಳಲ್ಲಿ ಪತಿಮಹಾಶಯನೊಬ್ಬ ತನ್ನ ಪತ್ನಿಗೆ ಕನ್ಯತ್ವ ಪರೀಕ್ಷೆಯಲ್ಲಿ ವಿಫಳಾಗಿದ್ದಾಳೆ ಎಂಬ ನೆಪವೊಡ್ಡಿ ವಿಚ್ಛೇದನವನ್ನು ನೀಡಿದ್ದಾನೆ.
ತಾನು ಪತ್ನಿಯ ಕನ್ಯತ್ವ ಪರೀಕ್ಷೆಯನ್ನು ಹೇಗೆ ಪರೀಕ್ಷೆ ನಡೆಸಿದೆ ಎಂಬುದನ್ನು ಸಾಬೀತು ಪಡಿಸಲು ಆತ ಪಂಚಾಯತ್‌ಗೆ ಕೆಲವು ಸಾಕ್ಷ್ಯಗಳನ್ನು ನೀಡಿದ್ದಾನೆ. ತಾನು ಪತ್ನಿಯೊಂದಿಗೆ ಸಹಶಯನ ನಡಿಸಿದ ಹಾಸಿಗೆಯನ್ನೂ ಅವನು ಪಂಚಾಯತ್‌ನ ಮುಂದೆ ಹಾಜರು ಪಡಿಸಿದ್ದಾನೆ. ಇವೆಲ್ಲವನ್ನು ಪರಿಶೀಲಿಸಿದ ಪಂಚಾಯತ್ ಮದುವೆ ಮುರಿಯಲು ಅನುಮತಿ ನೀಡುವ ಮೂಲಕ ವಿಚಿತ್ರ ತೀರ್ಪು ನೀಡಿದೆ. ವಿಚ್ಛೇದನ ಪಡೆದ ಯುವತಿ ಪೊಲೀಸ್ ಇಲಾಖೆಗೆ ಸೇರಲು ಸಿದ್ಧತೆ ನಡೆಸುತ್ತಿದ್ದಳು ಎಂದು ಸಾಮಾಜಿಕ ಕಾರ್ಯಕರ್ತರಾದ ರಂಜನಾ ಗಾವಾಂಡೆ ಮತ್ತು ಕೃಷ್ಣ ಚಂದಾಗುಡೆ ತಿಳಿಸಿದ್ದಾರೆ. ಸಿದ್ಧತೆಗಾಗಿ ಯುವತಿ ಓಡುವುದು, ಹಾರುವುದು, ಮತ್ತು ಸೈಕ್ಲಿಂಟ್ ಇತ್ಯಾದಿ ಶಾರೀರಿಕ ಅಭ್ಯಾಸಗಳಿದ್ದವು. ಇದೊಂದು ಸರಿಯಾದ ನಿರ್ಣಯವಲ್ಲ. ಪಂಚಾಯತ್‌ನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಅವರಿಬ್ಬರೂ ತಿಳಿಸಿದ್ದಾರೆ.





