ಕಾರು ಢಿಕ್ಕಿ: ಆಟೊ ಚಾಲಕನಿಗೆ ಗಾಯ

ಮಂಗಳೂರು, ಜೂ.1: ಕಾರೊಂದು ಆಟೊ ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಕಂಕನಾಡಿಯ ವೆಲೆನ್ಸಿಯಾ ವೃತ್ತದ ಬಳಿ ನಡೆದಿದೆ.
ಗಾಯಾಳು ಆಟೊ ಚಾಲಕನನ್ನು ನರೇಂದ್ರ ಕೊಟ್ಟಾರಿ (40) ಎಂದು ಗುರುತಿಸಲಾಗಿದೆ. ಆಟೊದೊಳಗೆ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಜೆಪ್ಪುನಿಂದ ಕಂಕನಾಡಿ ಕಡೆಗೆ ತೆರಳುತ್ತಿದ್ದ ಕಾರು ಆಟೊ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಕಾರು ಚಾಲಕ ಕುಡಿತದ ಅಮಲಿನಲ್ಲಿದ್ದು, ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story





