ಅಳದಂಗಡಿ: ಏಕಗವಾಕ್ಷಿ ಸೇವಾ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ, ಜೂ. 1: ಅಳದಂಗಡಿ ಗ್ರಾಮ ಪಂಚಾಯತ್ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಯೋಜನೆಯ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸೇವಾ ಕೇಂದ್ರದ ಉದ್ಘಾಟನೆಯನ್ನು ಜಿಪಂ ಸದಸ್ಯ ಶೇಖರ ಕುಕ್ಕೇಡಿ ನೆರವೇರಿಸಿದರು.
ಅಳದಂಗಡಿ ಗ್ರಾಪಂ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳ ಅನುಷ್ಠಾನದಲ್ಲಿಯ ವಿಭಿನ್ನತೆಗಳ ಹೋಗಲಾಡಿಸುವಿಕೆ, ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಮಧ್ಯೆ ಸಮನ್ವಯತೆ ವೃದ್ಧಿಸುವಿಕೆ ಮತ್ತು ಸಾಧ್ಯವಿರುವ ಕಡೆ ಅಭಿವೃದ್ಧಿಯ ಇತರೆ ಕ್ಷೇತ್ರಗಳೊಡನೆ ಜೋಡಣೆ ಮಾಡುವ ಒಂದು ಪ್ರಯತ್ನ ಏಕಗವಾಕ್ಷಿ ಕೇಂದ್ರವಾಗಿದೆ.
ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯೆ ವಿನುಷ ಪ್ರಕಾಶ್, ಬೆಂಗಳೂರು ಯೋಜನಾ ವ್ಯವಸ್ಥಾಪಕ ಕಾರ್ತಿಕ್, ಬೆಳ್ತಂಗಡಿ ವೃತ್ತ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ, ಸುಲ್ಕೇರಿ ಗ್ರಾಪಂ ಅಧ್ಯಕ್ಷೆ ಯಶೋಧಾ ಬಂಗೇರ, ಏಕಸೇವೆಯ ತಾಲೂಕು ಸಂಯೋಜಕಿ ಭವ್ಯಾ ಉಪಸ್ಥಿತರಿದ್ದರು.
ಬೆಳ್ತಂಗಡಿ ವೃತ್ತ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ ಸ್ವಾಗತಿಸಿದರು. ಅಳದಂಗಡಿ ಗ್ರಾಪಂ ಕಾರ್ಯದರ್ಶಿ ಭಾನುಕುಮಾರ್ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.







