ಅಳದಂಗಡಿ: ಲಯನ್ಸ್ ಕ್ಲಬ್ ಸೇರ್ಪಡೆ ಕಾರ್ಯಕ್ರಮ

ಬೆಳ್ತಂಗಡಿ, ಜೂ. 1: ಅಳದಂಗಡಿ ಲಯನ್ಸ್ ಕ್ಲಬ್‌ನ ವತಿಯಿಂದ ನೂತನ ಸದಸ್ಯರ ಸೇರ್ಪಡೆ ಮತ್ತು ಸನ್ಮಾನ ಕಾರ್ಯಕ್ರಮ ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಶ್ವೇತಭವನದಲ್ಲಿ ನಡೆಯಿತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸ್ವಾತಿ ಡೆಂಟಲ್ ಕ್ಲಿನಿಕ್‌ನ ಡಾ. ಶಶಿಧರ ಡೋಂಗ್ರೆ, ವಲಯಾಧ್ಯಕ್ಷ ನಿತ್ಯಾನಂದ ನಾವರ ಭಾಗವಹಿಸಿದ್ದರು. ಈ ಸಂದರ್ಭ ವೇಣೂರಿನಲ್ಲಿ ಪ್ರಾಂತೀಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದ ಪ್ರಾಂತೀಯ ಅಧ್ಯಕ್ಷ ಪ್ರವೀಣ ಕುಮಾರ್ ಇಂದ್ರರನ್ನು ಸನ್ಮಾನಿಸಲಾಯಿತು. ವಿಜಯ ಕುಮಾರ್ ಜೈನ್, ಸುಪ್ರೀತ್ ಜೈನ್, ಸುಕೇಶ್ ಜೈನ್, ಪ್ರಶಾಂತ ಶೆಟ್ಟಿ ಇವರನ್ನು ಕ್ಲಬ್ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.
ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು, ಕ್ಲಬ್ ಕೋಶಾಧಿಕಾರಿ ಎಚ್. ಧರ್ಣಪ್ಪ ಪೂಜಾರಿ, ಕ್ಲಬ್ ನಿಯೋಜಿತ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಶಿರ್ತಾಡಿ, ವೇಣೂರು, ಬೆಳ್ತಂಗಡಿ ಕ್ಲಬ್‌ಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಲಬ್ ಅಧ್ಯಕ್ಷ ಅಲೋಷಿಯಸ್ ಡಿ.ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹಿಲಾರಿ ಸ್ವಾಗತಿಸಿದರು.







