ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ಗೆ ಉತ್ತರ ಕೊರಿಯ ಬೆಂಬಲ

ಸಿಯೋಲ್, ಜೂ. 1: ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಉತ್ತರ ಕೊರಿಯ ಬೆಂಬಲಿಸಿದೆ. ‘‘ಸಮರ್ಥ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಅವರು ಪ್ರತಿ ದಿನವೂ ಉತ್ತರ ಕೊರಿಯದ ಪರಮಾಣು ದಾಳಿಯ ಭೀತಿಯಿಂದ ದಿನ ಸವೆಸುತ್ತಿರುವ’’ ಅಮೆರಿಕದ ಜನರನ್ನು ಭೀತಿಯಿಂದ ಪಾರು ಮಾಡಬಲ್ಲರು ಎಂಬುದಾಗಿ ಉತ್ತರ ಕೊರಿಯದ ಪ್ರಚಾರ ವೆಬ್‌ಸೈಟೊಂದರಲ್ಲಿ ಟ್ರಂಪ್‌ರನ್ನು ಶ್ಲಾಘಿಸಲಾಗಿದೆ.
‘‘ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ದಪ್ಪ ತಲೆಯ ಹಿಲರಿ ಕ್ಲಿಂಟನ್‌ಗೆ ಹೋಲಿಸಿದರೆ, ಟ್ರಂಪ್ ಜಾಣ ರಾಜಕಾರಣಿ ಹಾಗೂ ನವೆಂಬರ್ 8ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕನ್ನರ ಸರಿಯಾದ ಆಯ್ಕೆ’’ ಎಂದಿದೆ.
Next Story





