ಬೆಳ್ತಂಗಡಿ: ಅಪಘಾತದ ಗಾಯಾಳು ಮೃತ್ಯು
ಬೆಳ್ತಂಗಡಿ, ಜೂ. 1: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಹಸವಾರೊಬ್ಬರು ಮೃತಪಟ್ಟಿದ್ದಾರೆ.
ಉಜಿರೆಯಲ್ಲಿ ಮೂರು ದಿನಗಳ ಹಿಂದೆ ಧರ್ಮಸ್ಥಳದ ಅಶೋಕ ನಗರದ ಬಂಗುರ ಎಂಬವರ ಮಗ ಮಂಜು(29) ರಾಜೇಶ್ ಎಂಬವರ ಬೈಕಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ತನ್ನ ಮಾವನನ್ನು ನೋಡಲು ಬರುತ್ತಿದ್ದರು. ಈ ಸಂದರ್ಭ ಉಜಿರೆ ಪಂಚಮಿ ವಸತಿ ಗೃಹದ ಬಳಿ ಬೈಕ್ ಸ್ಕಿಡ್ ಆಗಿತ್ತು.
ಸವಾರ ರಾಜೇಶ್ ಗಾಯಗೊಂಡಿದ್ದರಲ್ಲದೆ ಸಹಸವಾರ ಮಂಜು ತೀವ್ರವಾಗಿ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಂಜು ಮಂಗಳವಾರ ಮೃತಪಟ್ಟರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





