ಪುತ್ತೂರು: ವಿವೇಕಾನಂದ ಕಾಲೇಜ್ ವಿದ್ಯಾರ್ಥಿಗಳ ಪ್ರೊಜೆಕ್ಟ್‌ಗೆ ಪ್ರಶಸ್ತಿ

ಪುತ್ತೂರು, ಜೂ.1: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಬೆಂಗಳೂರಿನ ಸಿಎಂಆರ್‌ಐಟಿ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಸೃಷ್ಟಿ-2016ರಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚೈತನ್ಯ ಆರಾಧ್ಯ ಯು.ಎಸ್., ನವೀನ್ ಎಸ್. ಹೆಗ್ಡೆ, ಸುದರ್ಶನ್ ಕೆ.ಎಚ್., ಶೇಖರ ವಿ.ಕೆ. ಇವರು ಉಪನ್ಯಾಸಕ ಅಜಿತ್ ಕೆ. ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ಮ್ಯಾನ್ಯುವಲಿ ಆಪರೇಟೆಡ್ ಪ್ಲೋರ್ ಕ್ಲೀನಿಂಗ್ ಮೆಷಿನ್‌ಗೆ ಈ ಪುರಸ್ಕಾರ ಲಭಿಸಿದೆ.
Next Story





