ಜೂ.2ರಂದು ಸಿಇಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ
ಮಂಗಳೂರು, ಜೂ. 1: ನಗರದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫಾರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.
ಜೂನ್ 2 ರಂದು ಬೆಳಗ್ಗೆ 9:30ಕ್ಕೆ ನಗರದ ಕಂದಕದಲ್ಲಿರುವ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಶಿಬಿರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಉನಾನಿ, ಹೋಮಿಯೋಪಥಿ, ಯೋಗ -ನ್ಯಾಚುರಾಪಥಿ, ಬಿ ಫಾರ್ಮ, ಫಾರ್ಮ ಡಿ. ಹಾಗೂ ಬಿಇ, ಬಿಟೆಕ್, ಬಿಎಸ್ಸಿಗಳ ವಿವಿಧ ಕೋರ್ಸ್‌ಗಳಿಗೆ ನಡೆಯಲಿರುವ ಆನ್‌ಲೈನ್ ಸಿಇಟಿ ಕೌನ್ಸೆಲಿಂಗ್‌ನ ವಿಧಾನ, ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಅಗತ್ಯ ಕಾಗದಪತ್ರಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಇತರ ಪೂರಕ ಮಾಹಿತಿ ನೀಡಲಾಗುವುದು.
ಪ್ರವೇಶ ಉಚಿತವಾಗಿದ್ದು ಭಾಗವಹಿಸಲಿಚ್ಛಿಸುವ ಆಸಕ್ತರು ಮೊಬೈಲ್ ಸಂಖ್ಯೆ 9845054191ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





