ಅಕ್ರಮ ಕಟ್ಟಿಗೆ ಜಪ್ತಿ

ಯಲ್ಲಾಪುರ, ಜೂ.1: ತಾಲೂಕಿನ ಯಲ್ಲಾಪುರದ ಇಂಡಸ್ಟ್ರೀಸ್ ಏರಿಯಾದಲ್ಲಿರುವ ಕರುಣಾ ಸಂಸ್ಥೆಯ ಸಾಮಾನ್ಯ ಸೌಲಭ್ಯ ಘಟಕದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಕಟ್ಟಿಗೆಗಳನ್ನು ಬುಧವಾರ ಜಪ್ತಿ ಮಾಡಿಕೊಂಡಿದ್ದಾರೆ.
ವಿಲಿಯಂ(37)ಎಂಬವರು ಈ ಇಂಡಸ್ಟ್ರೀಯನ್ನು ನಡೆಸುತ್ತಿದ್ದು, ಆತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ವೇಳೆಯಲ್ಲಿ 25 ಸಿಎಫ್‌ಟಿ ಅಕ್ರಮ ಕಟ್ಟಿಗೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಎಫ್ ಎಸ್.ಡಿ. ಮರಿಗೋಳೊಪ್ಪನವರ್ ನೇತ್ವದಲ್ಲಿ ದಾಳಿ ನಡೆಸಲಾಗಿತ್ತು. ತನಿಖೆ ಮುಂದುವರಿದಿದೆ.
Next Story





