ಹೈದರಾಬಾದ್: ಭಾರತದಲ್ಲಿ 'ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ಕಾಫಿ ಶೋಫೆ'ಯ ಪ್ರಥಮ ಕೇಂದ್ರ ಉದ್ಘಾಟನೆ

ಮಂಗಳೂರು, ಜೂ.1: ದುಬೈಯಲ್ಲಿ ಕೇಂದ್ರಸ್ಥಾವನ್ನು ಹೊಂದಿರುವ ತುಂಬೆ ಸಮೂಹ ಸಂಸ್ಥೆಯ ಹಾಸ್ಪಿಟಾಲಿಟಿ ವಿಭಾಗದ 'ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ಕಾಫಿ ಶೋಫೆ'ಯ ಘಟಕವನ್ನು ಭಾರತದಲ್ಲಿ ಪ್ರಥಮ ಬಾರಿಗೆ ಹೈದರಾಬಾದ್‌ನ ನ್ಯೂ ಲೈಫ್ ಹೆಲ್ತ್ ಕೇರ್ ಆಸ್ಪತ್ರೆ ಆವರಣದಲ್ಲಿ ಮೇ 30ರಂದು ಆರಂಭಿಸಿದೆ.
ನೂತನ ಘಟಕವನ್ನುತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಉದ್ಘಾಟಿಸಿದರು.
ಈ ಸಂದರ್ಭ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್, ತುಂಬೆ ಸಮೂಹ ಸಂಸ್ಥೆಯ ನಿರ್ಮಾಣ, ನವೀಕರಣ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಅಕ್ರಮ ಮೊಯ್ದಿನ್, ನ್ಯೂಲೈಫ್ ಆಸ್ಪತ್ರೆಯ ಸಂಸ್ಥಾಪಕ ಡಾ.ಮುಹಮ್ಮದ್ ಮಸೂದ್ ಅಲಿಖಾನ್ ಮೊದಲಾದವರು ಉಪಸ್ಥಿತರಿದ್ದರು.
Next Story





