ಕಲ್ಲಬೆಟ್ಟು : ಕೆರೆಪಾದೆ ಸತ್ಯನಾರಾಯಣ ಮಂದಿರ ನಿರ್ಮಾಣಕ್ಕೆ ಚೆಕ್ ವಿತರಣೆ

ಮೂಡುಬಿದಿರೆ, ಜೂ. 1: ಇಲ್ಲಿನ ಕಲ್ಲಬೆಟ್ಟು ಕೆರೆಪಾದೆ ಶ್ರೀ ಸತ್ಯನಾರಾಯಣ ಮಂದಿರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿರುವ 60,000 ರೂ. ಮೊತ್ತದ ಚೆಕ್ಕನ್ನು ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧಕ ಗಿರೀಶ್ ಮಂಗಳವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ಕ್ಷೇತ್ರದ ಅಧ್ಯಕ್ಷ ನಾರಾಯಣ ಪೂಜಾರಿ, ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ತಾರಾನಾಥ ಶೆಟ್ಟಿ, ಹಿರಿಯ ಸದಸ್ಯ ಸೂರ್ಯಣ್ಣ ಹೆಗ್ಡೆ, ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ, ಮಾತೃ ಮಂಡಳಿಯ ಅಧ್ಯಕ್ಷೆ ಸುನೀತಾ ಶೆಟ್ಟಿ ಮತ್ತು ಸರ್ವ ಸದಸ್ಯರು ್ಲ ಉಪಸ್ಥಿತರಿದ್ದರು.
Next Story





