ಭಟ್ಕಳ: ಎಸೆಸೆಲ್ಸಿ ಸಾಧಕನಿಗೆ ಸನ್ಮಾನ

ಭಟ್ಕಳ, ಜೂ. 1: ಸಬಾತಿಯ ತೆರ್ನಮಕ್ಕಿಯ ಶ್ರೀ ಜೈನ ಜಟ್ಗೇಶ್ವರ ಯುವಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ವಾರ್ಷಿ ಪರೀಕ್ಷೆಯಲ್ಲಿ ಶೇ.96 ಅಂಕಗಳನ್ನು ಗಳಿಸಿದ ವಿಶ್ವಬಾರತಿ ಪ್ರೌಢ ಶಾಲೆ, ಬೇಂಗ್ರೆಯ ವಿದ್ಯಾರ್ಥಿ ಸೂರಜ್ ವಿನಾಯಕ ಶೆಟ್ಟಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ಎನ್.ಶೆಟ್ಟಿ ವಿದ್ಯಾ ಸಂಸ್ಥೆಗಳ ನಿರ್ದೇಶಕ ಎಂ.ವಿ.ಹೆಗಡೆ, ಮುರ್ಡೇಶ್ವರ ಲಯನ್ಸ್ ಕ್ಲಬ್ ಸದಸ್ಯ ಗಜಾನನ ಶೆಟ್ಟಿ, ಶ್ರೀ ಜೈನ ಜಟ್ಗೇಶ್ವರ ಯುವಕ ಸಂಘದ ಅಧ್ಯಕ್ಷ ನಾಗೇಶ ನಾಯ್ಕ, ಕೃಷ್ಣ ನಾಯ್ಕ, ನಿತಿನ್ ವೈದ್ಯ ಮುಂತಾದವರು ಉಪಸ್ಥಿತರಿದ್ದರು.
Next Story





