ಈಜಿಪ್ಟ್ ಏರ್ ವಿಮಾನದ ಬ್ಲಾಕ್‌ಬಾಕ್ಸ್‌ನಿಂದ ಸಂಕೇತ ಪತ್ತೆ
ಕೈರೋ (ಈಜಿಪ್ಟ್), ಜೂ. 1: ಫ್ರಾನ್ಸ್‌ನ ನೌಕಾಪಡೆ ಹಡಗಿನಲ್ಲಿರುವ ನೀರಿನಾಳದಿಂದ ಸಂಕೇತಗಳನ್ನು ಗ್ರಹಿಸಬಲ್ಲ ಸಾಧನಗಳು ಈಜಿಪ್ಟ್‌ಏರ್ ವಿಮಾನದ ಒಂದು ಬ್ಲಾಕ್ ಬಾಕ್ಸ್‌ನಿಂದ ಹೊರಡುತ್ತಿರುವ ಸಂಕೇತಗಳನ್ನು ಸ್ವೀಕರಿಸಿದೆ ಎಂದು ತನಿಖಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೇ 19ರಂದು ಪ್ಯಾರಿಸ್‌ನಿಂದ ಕೈರೋಗೆ 66 ಮಂದಿಯನ್ನು ಹೊತ್ತು ಸಾಗುತ್ತಿದ್ದ ಏರ್‌ಬಸ್ ಎ320 ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನಗೊಂಡಿತ್ತು.
ವಿಮಾನ ಯಾಕೆ ಸಮುದ್ರದಲ್ಲಿ ಪತನಗೊಂಡಿತು ಎಂಬ ರಹಸ್ಯವನ್ನು ತಿಳಿಯುವಲ್ಲಿ ಬ್ಲಾಕ್ ಬಾಕ್ಸ್‌ನಲ್ಲಿರುವ ಮಹತ್ವದ ಹಾರಾಟ ದಾಖಲೆಗಳು ಸಹಾಯ ಮಾಡಬಹುದು ಎನ್ನಲಾಗಿದೆ.
Next Story





