ಸೌದಿ: ಭಯೋತ್ಪಾದನೆ ಆರೋಪದಲ್ಲಿ 14 ಮಂದಿಗೆ ಗಲ್ಲು
ರಿಯಾದ್, ಜೂ. 1: ಸೌದಿ ಅರೇಬಿಯದಲ್ಲಿ ಬುಧವಾರ ಭಯೋತ್ಪಾದನೆಯ ಆರೋಪದಲ್ಲಿ 14 ಮಂದಿಗೆ ಮರಣ ದಂಡನೆ ವಿಧಿಸಲಾಗಿದೆ. ಈಸ್ಟರ್ನ್ ಪ್ರಾವಿನ್ಸ್‌ನ ಕಾತಿಫ್ ಎಂಬ ಪ್ರದೇಶದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು.
ಇದೇ ಪ್ರಕರಣದಲ್ಲಿ ಇತರ ಒಂಬತ್ತು ಮಂದಿಗೆ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಹಾಗೂ ಓರ್ವನನ್ನು ಖುಲಾಸೆಗೊಳಿಸಲಾಗಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.
24 ಮಂದಿ ಆರೋಪಿಗಳು ಮೂರು ವರ್ಷಗಳಿಂದ ಬಂಧನದಲ್ಲಿದ್ದರು. ಅವರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಹಾಗೂ ಪೊಲೀಸರಿಗೆ ಗುಂಡು ಹಾರಿಸಿರುವ ಆರೋಪಗಳನ್ನು ಹೊರಿಸಲಾಗಿತ್ತು.
2011-14ರ ಅವಧಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸುಮಾರು 20 ಶಿಯಾಗಳು ಹಾಗೂ ಹಲವಾರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು.
Next Story





