ಕೆನಡ : ಕಾಡ್ಗಿಚ್ಚು ಪೀಡಿತ ನಗರಕ್ಕೆ ಮರಳಲು ಸಿದ್ಧರಾದ ಜನರು
ಲ್ಯಾಕ್ ಲ ಬಿಚೆ (ಆಲ್ಬರ್ಟ), ಜೂ. 1: ಕೆನಡದ ತೈಲ ನಗರ ಫೋರ್ಟ್ ಮೆಕ್‌ಮರೆಯಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಊರು ತೊರೆದಿದ್ದ ಸಾವಿರಾರು ನಿವಾಸಿಗಳು ಈಗ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ. ಆದರೆ, ಕಾಡ್ಗಿಚ್ಚಿನ ನಂತರ ಇಡೀ ನಗರವನ್ನು ಪುನರ್ನಿರ್ಮಿಸಬೇಕಾದ ಆವಶ್ಯಕತೆಯಿದ್ದು, ಅವರ ಜೀವನ ಸುಗಮವಾಗಿರುವುದಿಲ್ಲ. ಕುಡಿಯುವ ನೀರು ಮಲಿನವಾಗಿರುವ ಸಾಧ್ಯತೆ ಹಾಗೂ ವಿಮಾ ಪರಿಹಾರ ಪಡೆಯುವ ಬಗ್ಗೆ ನಿವಾಸಿಗಳು ಚಿಂತಿತರಾಗಿದ್ದಾರೆ.
ನಾಲ್ಕು ವಾರಗಳ ಹಿಂದೆ ಕಾಡ್ಗಿಚ್ಚು ಆವರಿಸಿದಾಗ ಮನೆಗಳನ್ನು ತೆರವುಗೊಳಿಸುವಂತೆ 80,000ಕ್ಕೂ ಅಧಿಕ ಜನರಿಗೆ ಆದೇಶ ನೀಡಲಾಗಿತ್ತು. ಸದ್ಯಕ್ಕೆ 14,000ದಿಂದ 15,000 ನಿವಾಸಿಗಳು ಮಾತ್ರ ನಗರಕ್ಕೆ ಮರಳಲು ಸಾಧ್ಯ ಎಂಬುದಾಗಿ ಅಧಿಕಾರಿಗಳು ಲೆಕ್ಕಹಾಕಿದ್ದಾರೆ. ಇಷ್ಟು ಮಂದಿಗೆ ಎರಡು ವಾರಗಳ ಅವಧಿಯಲ್ಲಿ ಪುನರ್ವಸತಿ ಮಾಡಿಕೊಡಲಾಗುವುದು.
Next Story





