ನಿಮಗೆ ಇದು ಗೊತ್ತೇ?:ಬರೀ ಕಾಲಲ್ಲಿ ನಡೆದರೆ ಸೊಂಟ ನೋವು, ಕಾಲಿನ ನೋವು ಮಾಯ

ಹೊಸದಿಲ್ಲಿ, ಜೂನ್2:ನೀವು ಯಾವಾಗ ಬರೀ ಕಾಲಲ್ಲಿ ನಡೆದಿದ್ದೀರಿ. ನೆನಪಿದೆಯಾ? ಹಿರಿಯರು ಹೇಳುವುದನ್ನು ನೀವು ಕೇಳಿಸಿಕೊಂಡಿರ ಬಹುದು. ವೈದ್ಯರು ಬರಿಕಾಲಲ್ಲಿ ಬೆಳಗ್ಗಿನ ಹೊತ್ತು ನಡೆಯಲು ಹೇಳುತ್ತಿದ್ದರು ಎಂದು. ಹೌದು, ಹಾಗೆ ನಡೆದರೆ ಪ್ರಯೋಜನ ಇದೆ. ಹೀಗೆ ನಡೆಯುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ. ಬರಿ ಕಾಲಲ್ಲಿ ನಡೆದರೆ ಯುವತ್ವ ಮಾಸುವುದಿಲ್ಲ. ಅದು ಹೇಗೆ? ಇಲ್ಲಿದೆ ಮಾಹಿತಿ-
ಭೂಮಿಯಲ್ಲಿ ಬರೀಕಾಲಲ್ಲಿ ನಡೆಯುವುದರಿಂದ ನಿಮ್ಮ ನಿಲ್ಲುವ ನಿಲುವು ಸರಿಯಾಗುವುದು. ಯಾಕೆಂದರೆ ಭೂಮಿಯಲ್ಲಿ ಕಾಲಿಟ್ಟ ಕೂಡಲೇ ಮೆದುಳು ಸಕ್ರಿಯವಾಗುತ್ತದೆ. ಮೆದುಲು ಸರಿಯಾದ ರೀತಿ ಚಲಿಸಲು ಅದು ಆರಂಭಿಸುತ್ತದೆ. ಮೆದುಳು ಸರಿಯಾಗಿ ಸಕ್ರಿಯಗೊಂಡರೆ ಸೊಂಟದ ನೋವು ಕೂಡ ಇಲ್ಲದಾಗುತ್ತದೆ.
ಕಾಲಿನ ನೋವು ದೂರ ಮಾಡಲು ದಿನಾಲೂ ಸ್ವಲ್ಪಸಮಯ ಬರೀ ಕಾಲಲ್ಲಿ ನಡೆಯಬೇಕು. ಒಂದು ಸಲ ನೀವು ಬರೀಕಾಲಲ್ಲಿ ನಡೆಯಲು ಆರಂಭಿಸಿ ನೋಡಿ. ಮೊದಮೊದಲು ನಡೆಯುವಾಗ ನೋವಾಗುತ್ತದೆ. ಅಭ್ಯಾಸಮಾಡಿದರೆ ಅದು ಸರಿಯಾಗುತ್ತದೆ.
ಬರೀ ಕಾಲಲಲ್ಲಿ ನಡೆಯುವುದರಿಂದ ಪಾದದ ರಕ್ತಸಂಚಲನೆ ಹೆಚ್ಚುತ್ತದೆ. ಅದರಿಂದ ಕಾಲಿನ ಕೆಳಭಾಗ ಗಟ್ಟಿಯಾಗುತ್ತದೆ.
ಹೀಗೆ ನಡೆಯಲು ಆರಂಭಿಸಿದರೆ ಎಲ್ಲ ಹಳೆಯ ನೋವುಗಳು ಮಾಯವಾಗಿ ಬಿಡುತ್ತದೆ . ಅದಲ್ಲದೆ ಕಾಲು ಮೃದು ಆಗುತ್ತದೆ. ಸುದೀರ್ಘ ಸಮಯದಿಂದ ಚಪ್ಪಲಿ ಧರಿಸುವುದರಿಂದ ಕಾಲು ದಡ್ಡು ಕಟ್ಟಿರುತ್ತದೆ. ಭೂಮಿಯಲ್ಲಿ ಬರೀ ಕಾಲಲ್ಲಿ ನಡೆದರೆ ಕಾಲು ಮೃದುವಾಗುತ್ತದೆ.
ಇದು ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೀವು ಹುಲ್ಲಿನಲ್ಲಿ ಬರೀಕಾಲಿನಲ್ಲಿ ನಡೆದರೆ ಮೆದುಳು ಶಾಂತವಾಗುತ್ತದೆ ಮತ್ತು ಒತ್ತಡ ದೂರವಾಗುತ್ತದೆ.







