ವಿಮಾನದ ಕಾರ್ಗೋ ವಿಭಾಗದೊಳಗೆ ನುಸುಳಿ ದುಬೈಗೆ ಹೋದ ಚೀನೀ ಹುಡುಗ!

ಚೀನಾದಲ್ಲಿ ಹದಿಹರೆಯದ ಬಾಲಕನೊಬ್ಬ ಎಮಿರೇಟ್ಸ್ ಪ್ಯಾಸೆಂಜರ್ ವಿಮಾನದ ಕಾರ್ಗೋ ಒಳಗೆ ನುಗ್ಗಿದ್ದಾನೆ ಮತ್ತು ವಿಮಾನ ಅಧಿಕಾರಿಗಳಿಗೆ ಸಿಕ್ಕಿ ಬೀಳುವ ಮೊದಲು ದುಬೈಗೆ ಪ್ರಯಾಣ ಬೆಳೆಸಿದ್ದಾನೆ ಎಂದು ಚೀನೀ ಮಾಧ್ಯಮ ಮತ್ತು ಏರ್‌ಲೈನ್ ಸಂಸ್ಥೆ ಮಾಹಿತಿ ಕೊಟ್ಟಿದೆ.
ಪಲಾಯನಗೈದ ಬಾಲಕ ಷಾಂಗೈನಿಂದ ಮೇ 27ರಲ್ಲಿ ಹೊರಟಿದ್ದ ವಿಮಾನದ ಕಾರ್ಗೋದಲ್ಲಿ ಕಂಡು ಬಂದಿದ್ದ. ಎಂದು ಏರ್‌ಲೈನ್ ಸಂಸ್ಥೆ ಹೇಳಿದೆ. ನಾವು ದುಬೈನಲ್ಲಿ ಅಧಿಕಾರಿಗಳ ಜೊತೆಗೆ ಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ಇದು ಪೊಲೀಸರು ನಿಭಾಯಿಸಬೇಕಾದ ವಿಷಯವಾಗಿರುವ ಕಾರಣ ನಾವು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದು ಏರ್‌ಲೈನ್ ಸಂಸ್ಥೆ ಹೇಳಿದೆ. ಆದರೆ ಏರ್‌ಲೈನ್ಸ್ ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ. ಚೀನಾದ ಮಾಧ್ಯಮಗಳ ಪ್ರಕಾರ ಕ್ಸು ಎನ್ನುವ 16ರ ಬಾಲಕನೇ ಪಲಾಯನಗೈದ ವೀರ. ದುಬೈನಲ್ಲಿ ಭಿಕ್ಷುಕರು ವಾರ್ಷಿಕವಾಗಿ 1000 ಯುವಾನ್‌ಗಳನ್ನು ಗಳಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಾಲಕ ಈ ಅಪಾಯಕಾರಿ ಸಾಹಸಕ್ಕೆ ಇಳಿದಿದ್ದ ಎನ್ನಲಾಗಿದೆ. ಚೀನಾ ರಾಯಭಾರ ಕಚೇರಿಯು ಬಾಲಕನ ಬಗ್ಗೆ ಹೆಚ್ಚು ವಿವರಕ್ಕಾಗಿ ಅಧಿಕಾರಿಗಳನ್ನು ಕಳುಹಿಸಿದೆ. ವರದಿಗಳ ಪ್ರಕಾರ ಬಾಲಕ ಷಾಂಗೈ ವಿಮಾನ ನಿಲ್ದಾನದ ಬೇಲಿಯನ್ನು ಹಾರಿ ಭದ್ರತಾ ಅಧಿಕಾರಿಗಳ ಕಣ್ಣು ತಪ್ಪಿಸಿ ವಿಮಾನದ ಸರಕು ಸರಂಜಾಮು ಇಡುವ (ಕಾರ್ಗೋ) ಜಾಗ ಸೇರಿದ್ದ.
ಕೃಪೆ:www.khaleejtimes.com





