ಆಂಟಿ ಸೈಕಾಟಿಕ್ ಔಷಧಿಗಳಿಗೂ ಸ್ವಲೀನತೆಗೂ ನಂಟಿದೆ

ಆಂಟಿಸೈಕಾಟಿಕ್ ಔಷಧಿಗಳನ್ನು ಯಾವುದೇ ಕಾರಣಕ್ಕೂ ಸೇವಿಸುತ್ತಿದ್ದರೂ ಅದರಿಂದ ಸಮಸ್ಯೆಗಳು ಕಾಣಲಿವೆ ಎಂದು ಸಂಶೋಧಕರು ಹೇಳಿದ್ದಾರೆ. ಹದಿಹರೆಯದಲ್ಲಿ ಆಂಟಿ ಸೈಕಾಟಿಕ್ ಔಷಧಿ ಸೇವಿಸುವುದು ಸ್ವಲೀನತೆ ಅಥವಾ ಬೌದ್ಧಿಕ ವಿಕಸನ ತಡೆಗೆ ಕಾರಣವಾಗಲಿದೆ. ಈ ಔಷಧಿಗಳನ್ನು ಸೇವಿಸಿರುವ ಯುವ ಜನರಲ್ಲಿ ಈ ಪರಿಣಾಮಗಳು ಹೆಚ್ಚಾಗಿರುವುದು ಕಂಡುಬಂದಿದೆ.
ಆಂಟಿ ಸೈಕಾಟಿಕ್ ಔಷಧಿಗಳು ಸಾಮಾನ್ಯವಾಗಿ ಸೈಕೋಸಿಸ್, ಭ್ರಮೆಗಳು, ಹಲ್ಯುಸಿನೇಶನ್, ಪ್ಯಾರನೋಯ ಅಥವಾ ಚಿಂತನೆಯ ರೋಗವಾದ ಸ್ಕಿಝೋಫ್ರೇನಿಯ ಮತ್ತು ಬೈಪೋಲಾರ್ ರೋಗಗಳನ್ನು ನಿವಾರಿಸಲು ಸೇವಿಸಲಾಗುತ್ತದೆ. ಆದರೆ ಸಂಶೋಧಕರು ಹೇಳಿರುವಂತೆ ಯುವಜನರು ಇಂತಹ ಔಷಧಿ ಸೇವಿಸಿದಾಗ ಸ್ವಲೀನತೆಯ ರೋಗ ಅವರಲ್ಲಿ ಕಂಡುಬರಬಹುದು. ಔಷಧಿ ಸೇವನೆ ಧೀರ್ಘವಾದಂತೆ ಸಮಸ್ಯೆ ತೀವ್ರವಾಗಲಿದೆ ಎಂದೂ ಹೇಳಲಾಗಿದೆ.
ಈ ಅಧ್ಯಯನಕ್ಕಾಗಿ ಸಂಶೋಧಕರು 38 ಅಧ್ಯಯನಗಳ ವಿಶ್ಲೇಷಣೆ ಮಾಡಿ 3,50,000 ಮಾನಸಿಕ ಸಮಸ್ಯ ಇರುವ ಯುವಜನರನ್ನು ಪರೀಕ್ಷಿಸಿದ್ದಾರೆ. ಈ ಅಧ್ಯಯನದಲ್ಲಿ ಆಂಟಿ ಸೈಕಾಟಿಕ್ ಪಡೆಯುತ್ತಿದ್ದ ಯುವಜನರು ಸ್ವಲೀನತೆ ಸಮಸ್ಯೆ ಅಥವಾ ಬೌದ್ಧಿಕ ವೈಕಲ್ಯವನ್ನು ತೋರಿಸಿರುವುದು ಪತ್ತೆಯಾಗಿದೆ. ಆಂಟಿ ಸೈಕಾಟಿಕ್ ಔಷಧಿಗಳ ಅಡ್ಡ ಪರಿಣಾಮಗಳು ಮುಖ್ಯವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಮಸ್ಯೆ ಸೃಷ್ಟಿಸಲಿವೆ ಎಂದು ಸಂಶೋಧಕರಾದ ಅಮೆರಿಕದ ಹಾಫ್ಸ್ಟ್ರಾ ವಿಶ್ವವಿದ್ಯಾಲಯದ ಕ್ರಿಸ್ಟೋಫ್ ಕಾರೆಲ್ ಹೇಳಿದ್ದಾರೆ.
ಈ ಆಂಟಿ ಸೈಕಾಟಿಕ್ ಔಷಧಿಗಳು ಕೇವಲ ಮಾನಸಿಕ ಸಮಸ್ಯೆಗಳ ಚಿಹ್ನೆಗಳಾದ ಉಗ್ರ ಸ್ವಭಾವ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡಲಿದೆ. ಸ್ವಲೀನತೆಯ ಚಿಹ್ನೆಗಳಾದ ಸಾಮಾಜಿಕವಾಗಿ ಬೆರೆಯುವುದು ಮತ್ತು ಸಂಪರ್ಕ ಸಮಸ್ಯೆಗಳು ಮತ್ತು ಬೌದ್ಧಿಕ ವೈಕಲ್ಯದ ಚಿಹ್ನೆಗಳಾದ ಅರ್ಥ ಮಾಡಿಕೊಳ್ಳುವುದು ಮತ್ತು ಅಂಕಿ ಅಂಶಗಳನ್ನು ಸೂಕ್ತವಾಗಿ ವಿಶ್ಲೇಷಿಸುವಲ್ಲಿ ವಿಫಲವಾಗಿರುವುದು ಕಂಡು ಬರಲಿದೆ.
ಹೀಗಾಗಿ ಮಾನಸಿಕ ರೋಗಗಳಿಗೆ ಚಿಕಿತ್ಸೆ ನೀಡುವವರು ಅಂಗೀಕೃತವಾದ ಮತ್ತು ಕಡಿಮೆ ಅಡ್ಡಪರಿಣಾಮಗಳಿರುವ ಔಷಧಿಗಳನ್ನೇ ಬಳಸಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಈ ಔಷಧಿಗಳನ್ನು ಕೊಡುವಾಗ ರೋಗಿಯಲ್ಲಿ ಆಗುವ ಬದಲಾವಣೆಗಳನ್ನೂ ವೈದ್ಯರು ಗುರುತಿಸುತ್ತ ಮತ್ತು ಗಮನಿಸುತ್ತಾ ಇರಬೇಕು ಎಂದೂ ಸಂಶೋಧಕರು ಹೇಳಿದ್ದಾರೆ.
ಕೃಪೆ: timesofindia.indiatimes.com







