ಹೂಡೆ: ಪಿಕ್‌ಅಪ್ ಢಿಕ್ಕಿ - ಒಂದೂವರೆ ವರ್ಷದ ಮಗು ಮೃತ್ಯು

ಉಡುಪಿ, ಜೂ.2: ಬೊಲೇರೋ ಪಿಕ್‌ಅಪ್ ಢಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಹೂಡೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಕೂಲಿ ಕಾರ್ಮಿಕರಾಗಿರುವ ಗದಗದ ಸಿರಹಟ್ಟಿ ಗ್ರಾಮ ನಿವಾಸಿ ರಾಜಪ್ಪ ಎಂಬವರ ಪುತ್ರ ಬಸವರಾಜ ಮೃತಪಟ್ಟ ಮಗು.
ಇಲ್ಲಿನ ಪ್ಯಾರಡೈಸ್ ಹೊಟೇಲ್ ಬಳಿ ಆಟ ಆಡುತ್ತಿದ್ದ ಮಗುವಿಗೆ ಬೊಲೇರೋ ಪಿಕ್‌ಅಪ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮೃತದೇಹವನ್ನು ಅಜ್ಜರಕಾಡಿನ ಶವಗಾರದಲ್ಲಿ ಇರಿಸಲಾಗಿದೆ. ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





