ಜೂ.3ರಂದು ಸುನ್ನೀ ಸಂದೇಶ ಪತ್ರಿಕೆಯ 14ನೆ ವಾರ್ಷಿಕ ಸಂಭ್ರಮ
ಸಮಸ್ತದ ಸಾರಥಿಗಳಿಗೆ ಸನ್ಮಾನ, ರಂಝಾನ್ ಪ್ರಭಾಷಣೆ
ಮಂಗಳೂರು, ಜೂ. 2: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ (ಕಿಸಾ) ಮಂಗಳೂರು ಇದರ ವತಿಯಿಂದ ಸುನ್ನೀ ಸಂದೇಶ ಮಾಸಿಕದ 14ನೆ ಸಂಭ್ರಮದ ಪ್ರಯುಕ್ತ ಜೂ.3 ರಂದು ಮಧ್ಯಾಹ್ನ 3:30ಕ್ಕೆ ಮಂಗಳೂರಿನ ಪುರಭವನದಲ್ಲಿ ‘ರಂಝಾನ್ ಕರೆಯುತ್ತಿದೆ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಅಧ್ಯಕ್ಷರಾಗಿದ್ದ ಕೋಯಕುಟ್ಟಿ ಉಸ್ತಾದ್ ಹಾಗೂ ಕಾರ್ಯದರ್ಶಿಯಾಗಿದ್ದ ಝೈನುಲ್ ಉಲಮಾ ಉಸ್ತಾದ್‌ರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಮಸ್ತ ಸಾರಥಿಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದ ಮೊದಲಿಗೆ ಮಂಗಳೂರು ಕೇಂದ್ರ ಜುಮಾ ಮಸೀದಿಯ ಸೈಯದ್ ಮೌಲಾ ದರ್ಗಾ ಝಿಯಾರತ್ ಮಧ್ಯಾಹ್ನ 2 ಗಂಟೆಗೆ ಶೈಖುನಾ ಎಂ.ಟಿ. ಉಸ್ತಾದ್‌ರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 3 ಗಂಟೆಗೆ ಪುರಭವನದ ಸಭಾಂಗಣದಲ್ಲಿ ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಐ. ಮೊದಿನಬ್ಬ ಹಾಜಿ ಧ್ವಜಾರೋಹಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶೈಖುನಾ ಖಾಝಿ ತ್ವಾಖಾ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭವನ್ನು ಜಬ್ಬಾರ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುವಾ ಆಶೀರ್ವಚನ ನೀಡಲಿದ್ದಾರೆ. ಸಮಸ್ತ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕುಮರಂಪುತ್ತೂರು, ಸಮಸ್ತ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ಎಂ.ಟಿ ಉಸ್ತಾದ್, ಕೊಯ್ಯೋಡು ಉಸ್ತಾದ್, ಖಾಸಿಂ ಉಸ್ತಾದ್, ಎಸ್ಕೆಎಸೆಸೆಫ್ ಕೇಂದ್ರೀಯ ಅಧ್ಯಕ್ಷ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಂಬ್ರಾಣ ಉಸ್ತಾದ್, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮೊದಲಾದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದೇವೆ.
‘ರಂಝಾನ್ ಕರೆಯುತ್ತಿದೆ’ ಎಂಬ ವಿಷಯದಲ್ಲಿ ಕುರ್‌ಆನ್ ವಿದ್ವಾಂಸ ಸಿಂಸಾರುಲ್ ಹಖ್ ಹುದ ಅಬುದಾಬಿ ಹಾಗೂ ‘ಸಮಸ್ತದ ಮಹೋನ್ನತ ನಾಯಕ’ ಎಂಬ ವಿಷಯದಲ್ಲಿ ಹಾಜಿ ಅಬ್ದುಸ್ಸಮದ್ ಪೂಕೋಟೂರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಶಾಸಕರಾದ ಮಣ್ಣಾರ್‌ಕಾಡ್ ಎಂ.ಎಲ್.ಎ. ಅಡ್ವ. ಶಂಸುದ್ದೀನ್, ಎನ್.ಎ. ನೆಲ್ಲಿಕುನ್ನು ಕಾಸರಗೋಡು, ಅಬ್ದುರ್ರಝಾಕ್ ಮಂಜೇಶ್ವರ, ಸಚಿವ ಯು.ಟಿ. ಖಾದರ್, ಮದ್ರಸ ಶಿಕ್ಷಣ ಮಂಡಳಿಯ ಕೇಂದ್ರೀಯ ಸದಸ್ಯರಾದ ಕೆ.ಯಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ಗೋಳ್ತಮಜಲು, ದ.ಕ. ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಐ.ಮೊದಿನಬ್ಬ ಹಾಜಿ ಮಂಗಳೂರು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಹಾಜಿ, ಯೆನೆಪೊಯ ವಿದ್ಯಾ ಸಂಸ್ಥೆಯ ಕುಲಪತಿ ವೈ.ಅಬ್ದುಲ್ಲ ಕುಂಞಿ ಹಾಜಿ, ದಾರುನ್ನೂರ್ ಕಾಶಿಪಟ್ನ ಎಜುಕೇಶನ್ ಸೆಂಟರ್ ಅಧ್ಯಕ್ಷ ವೈ. ಮುಹಮ್ಮದ್ ಕುಂಙಿ ಹಾಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಹಾಜಿ, ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಮಂಗಳೂರು, ಮೆಟ್ರೋ ಹಾಜಿ ಗುರುಪುರ, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಪತ್ರಿಕಾ ಸಮ್ಮೇಳನದಲ್ಲಿ ಸುನ್ನೀ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ.ಎಸ್. ಹೈದರ್ ದಾರಿಮಿ ಕಲ್ಲಡ್ಕ, ಸಂಪಾದಕ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಡೈರೆಕ್ಟರಾದ ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಎಂ.ಎ. ಅಬ್ದುಲ್ಲಾ ಹಾಜಿ ಬೆಲ್ಮ ರೆಂಜಾಡಿ, ಮುಸ್ತಾಫಾ ಫೈಝಿ ಕಿನ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







