ಎಚ್.ಡಿ. ರೇವಣ್ಣಗೆ ಸಚಿವ ಎ.ಮಂಜು ಸವಾಲು
ಜಿಪಂ ಸಭೆಗೆ ಜೆಡಿಎಸ್ ಸದಸ್ಯರು ಗೈರು ವಿಚಾರ

ಹಾಸನ, ಜೂ. 2: ಜಿಲ್ಲಾ ಪಂಚಾಯತ್ ನಾಲ್ಕನೆ ಸಭೆಗೂ ಜೆಡಿಎಸ್ ಸದಸ್ಯರು ಬಾರದೆ ಇರಲಿ ನೋಡೋಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಮೂರು ಬಾರಿ ಬಾರದ ಜೆಡಿಎಸ್ ಜಿಪಂ ಸದಸ್ಯರು ಶುಕ್ರವಾರ ನಡೆಯಲಿರುವ ನಾಲ್ಕನೆ ಸಭೆಯಲ್ಲಿ ಕಾನೂನು ರೀತಿ ಏನು ಆಗಬೇಕು ಆಗುತ್ತದೆ ಎಂದು ಸವಾಲು ಹಾಕಿದರು.
ತನ್ನ ರಾಜಕೀಯ ಜೀವನದಲ್ಲಿ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಪತ್ರ ಬರೆದಿದ್ದೇನೆ. ಏನೇ ಆದರೂ ಕಾನೂನು ಪ್ರಕಾರ ಜಿಪಂ ಚುನಾವಣೆ ನಡೆಯಲಿದೆ ಎಂದರು. ಮೂರು ಬಾರಿ ಜಿಪಂಸಭೆಗೆ ಬಾರದೆ ಅಧ್ಯಕ್ಷೆ ಅಭ್ಯರ್ಥಿಗೆ ವಂಚಿತರಾಗಿ ಮಾಡಿರುವ ಜೆಡಿಎಸ್ ಬೆಂಬಲಿತ ಸದಸ್ಯರು ರಾಜಕೀಯ ಶಕ್ತಿ ಇದ್ದರೆ ನೋಡುವ ಕೆಲಸ ಮಾಡಲಿ ಎಂದು ಕಿಡಿಕಾರಿದರು.
ಇವರಿಗೆ ಜಿಪಂನಲ್ಲಿ 23 ಜನ ಸದಸ್ಯರ ಬೆಂಬಲವಿದೆ. ಆದರೆ ಇವರೆ 12 ಬಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದಾರೆ. ಪರಿಶಿಷ್ಟ ಪಂಗಡದ ಮಹಿಳೆ ಅಭ್ಯರ್ಥಿಗೆ ಮಾನ್ಯತೆ ನೀಡದ ಜೆಡಿಎಸ್ ಪಕ್ಷದ ಮೇಲೆ ಅನುಮಾನಗಳು ಜನರಲ್ಲಿ ಹುಟ್ಟಿದೆ ಎಂದು ದೂರಿದರು. ಹಿರಿಯ ರಾಜಕಾರಣಿ ಎಚ್.ಡಿ. ದೇವೆಗೌಡರಿಗೆ ಗೌರವ ಕೊಡುತ್ತೇನೆ. ಅದರಂತೆ ಅವರಿಗೆ ಪತ್ರ ಬರೆದು ಪೂರ್ಣ ವಿಚಾರ ತಿಳಿಸಿರುವುದಾಗಿ ಇದೆ ವೇಳೆ ಪತ್ರವನ್ನು ಪ್ರದರ್ಶಿಸಿದರು. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಅದರಂತೆ ಅವರು ಕೂಡ ಕೊಡಬೇಕು ಎಂದರು. 3 ಸಭೆಯಲ್ಲಿ ಪಾಲ್ಗೊಳ್ಳದ ಸದಸ್ಯರ ಸದಸ್ಯತ್ವವೇ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಸದಸ್ಯ ರಾಜೇಶ್ (ಬಾಬಿ), ಜಿಪಂ ಅಧ್ಯಕ್ಷೆ ಅಭ್ಯರ್ಥಿ ಶ್ವೇತಾ ಇತರರು ಇದ್ದರು.







